ಅತ್ಯಾಚಾರ ನಡೆಸಲು ವಿರೋಧಿಸಿದ ಮಹಿಳೆಯ ಕೊಲೆಗೈದ ಅಪ್ರಾಪ್ತ: ಮೃತದೇಹವನ್ನೂ ಬಿಡದೆ ಅತ್ಯಾಚಾರ ಎಸಗಿದ ಕಾಮುಕ
Friday, September 17, 2021
ರಾಜಸ್ಥಾನ: ಅತ್ಯಾಚಾರ ನಡೆಸಲು ವಿರೋಧಿಸಿರುವುದಕ್ಕೆ ಅಪ್ರಾಪ್ತ ವಯಸ್ಕನೋರ್ವ ಮಹಿಳೆಯೋರ್ವಳನ್ನು ಕೊಲೆಗೈದು, ಆಕೆಯ ಮೃತದೇಹದ ಮೇಲೆಯೇ ಅತ್ಯಾಚಾರ ನಡೆಸಿರುವ ಪೈಶಾಚಿಕ ಕೃತ್ಯ ರಾಜಸ್ಥಾನದ ಹನುಮಾನ್ ಘರ್‌ನ ಪಿಲಿಬಾಂಗಾ ಪಟ್ಟಣದಲ್ಲಿ ನಡೆಸಿದ್ದಾನೆ.
60 ವರ್ಷದ ಮಹಿಳೆಯ ಮೇಲೆ 17 ವರ್ಷದ ಯುವಕನೋರ್ವನು ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಆದರೆ ಆಕೆ ಪ್ರತಿರೋಧ ಒಡ್ಡಿದ್ದಾಳೆ. ಇದರಿಂದ ಕ್ರುದ್ಧನಾದ ಆತ ಮಹಿಳೆಯನ್ನು ಕೊಂದು, ಆಕೆಯ ಮೃತದೇಹದ ಮೇಲೆಯೇ ಪೈಶಾಚಿಕ ಕೃತ್ಯ ಮೆರೆದಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅತ್ಯಾಚಾರ, ಕೊಲೆ ಮಾಡುವಾಗ ಆರೋಪಿ ಅಮಲಿನ ಸ್ಥಿತಿಯಲ್ಲಿದ್ದ ಎನ್ನಲಾಗಿದೆ.
ಆರೋಪಿಯು ಮಹಿಳೆಯ ಮನೆಯೊಳಗೆ ನುಗ್ಗಿ ಏಕಾಏಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ಪ್ರತಿರೋಧ ಒಡ್ಡಿರುವುದರಿಂದ ಕೊಲೆಗೈದು ಆಕೆಯ ಮೃತದೇಹದ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.