ಮುಂಬೈ: ಅತ್ಯಾಚಾರ ಎಸಗಿ, ಖಾಸಗಿ ಅಂಗದೊಳಗೆ ಸಲಾಕೆ ತುರುಕಿಸಿ ಅಟ್ಟಹಾಸ ಮೆರೆದ ಕಾಮುಕರು.... ಚಿಕಿತ್ಸೆ ಫಲಿಸದೆ ಮಹಿಳೆ ಸಾವು...
Saturday, September 11, 2021
ಮುಂಬೈ: ಮುಂಬೈ ನ ಸಾಕಿನಾಕ ಎಂಬ ಪ್ರದೇಶದಲ್ಲಿ ರೇಪ್ ಗೆ ಒಳಗಾದ ಮಹಿಳೆ ಇಂದು ಆಸ್ಪತ್ರೆಯಲ್ಲಿ ಸಾವಪ್ಪಿದ್ದಾಳೆ.
ರೇಪ್ ಗೆ ಮತ್ತು ದೈಹಿಕ ಹಿಂಸೆಗೆ ಒಳಗಾಗಿದ್ದ 32ವರ್ಷದ ಸಂತ್ರಸ್ತೆ ಆಸ್ಪತ್ರೆಯಲ್ಲಿ ಕಳೆದ 33 ಗಂಟೆಗಳಿಂದ ಹೋರಾಟ ನಡೆಸುತ್ತಿದ್ದಳು.ಆದರೆ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಶುಕ್ರವಾರ ಬೆಳಗಿನ ವೇಳೆ ನಿಲ್ಲಿಸಿದ್ದ ಟೆಂಪೋ ಒಂದರಲ್ಲಿ ಮಹಿಳೆಯೊಬ್ಬಳು ಬಿದ್ದಿರುವುದನ್ನು ಕಂಡ ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಕಾಮುಕರು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಕಬ್ಬಿಣದ ಸಲಾಕೆಯನ್ನು ಖಾಸಗಿ ಅಂಗದೊಳಕ್ಕೆ ತೂರಿಸಿ ವಿಕೃತಿ ಮೆರೆದಿರುವುದು ಪರೀಕ್ಷೆಯ ನಂತರ ಬೆಳಕಿಗೆ ಬಂದಿದೆ.
ಈ ಕೃತ್ಯ ಎಸಗಿದ ರಾಜಸ್ತಾನ ಮೂಲದ ಮೋಹನ್ ಚೌಹಾನ್(45) ಎಂಬಾತನನ್ನು ಸಿಸಿಟಿವಿ ದೃಶ್ಯಗಳ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ.