ಮಾವನಿಂದಲೇ ಲೈಂಗಿಕ ಕಿರುಕುಳ, ಕೋಳಿ ರಕ್ತ ಕುಡಿಸಿ ಹಿಂಸೆ: ಠಾಣೆ ಮೆಟ್ಟಿಲೇರಿದ ಸೊಸೆ
Monday, September 27, 2021
ಮುಂಬೈ: ಮಾವನೇ ಸೊಸೆಗೆ ಲೈಂಗಿಕ ಕಿರುಕುಳ ನೀಡಿರುವುದಲ್ಲದೆ, ಮಂತ್ರವಾದಿಯೊಬ್ಬನ ಮಾತುಕೇಳಿ ಕೋಳಿ ರಕ್ತವನ್ನು ಬಲವಂತವಾಗಿ ಕುಡಿಸಿ ದೌರ್ಜನ್ಯ ನಡೆಸಿರುವ ಬಗ್ಗೆ ಥಾಣೆ ಜಿಲ್ಲೆಯ ಭೋಸಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
33 ವರ್ಷದ ಯುವತಿ ಈ ಬಗ್ಗೆ, ತನ್ನ ಪತಿ, ಮಾವ, ಅತ್ತೆಯ ವಿರುದ್ಧ ದೂರು ದಾಖಲಿಸಿದ್ದಾಳೆ. ' ತನ್ನ ಪತಿ ಲೈಂಗಿಕವಾಗಿ ಅಸಮರ್ಥನಾಗಿದ್ದು, ದುರ್ಬಲನಾಗಿದ್ದಾನೆ. ಆತನಿಂದ ತನಗೆ ಮಕ್ಕಳಾಗಿರಲಿಲ್ಲ. ಆದ್ದರಿಂದ ಮಾವ ಲೈಂಗಿಕವಾಗಿ ಸಹಕರಿಸುವಂತೆ ತನ್ನನ್ನು ನಿತ್ಯವೂ ಪೀಡಿಸುತ್ತಿದ್ದ. ಅಲ್ಲದೆ ನೀನು ಗರ್ಭ ಧರಿಸುವಂತೆ ಮಾಡುತ್ತೇನೆಂದು ಒತ್ತಾಯಿಸುತ್ತಿದ್ದ' ಎಂದು ದೂರಿನಲ್ಲಿ ಹೇಳಿದ್ದಾಳೆ.
ನಾನು ಪತಿಯ ದೌರ್ಬಲ್ಯದ ಬಗ್ಗೆ ತಿಳಿದು ನನ್ನ ತವರು ಮನೆಯವರಿಗೆ ತಿಳಿಸಿದ್ದೆ. ಆದರೆ, ಈ ವಿಚಾರವನ್ನು ತವರು ಮನೆಯಲ್ಲಿ ಹೇಳಿರುವುದಕ್ಕೆ ಕೇಳಿ ಸಿಟ್ಟಾದ ಅತ್ತೆ ಮತ್ತು ಮಾವ ತನಗೆ ಹಲ್ಲೆ ನಡೆಸಿದ್ದಾರೆ. 2018ಕ್ಕೆ ತನಗೆ ಮದುವೆಯಾಗಿದ್ದು, ಆ ಬಳಿಕದಿಂದ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಅನುಭವಿಸಿದ್ದೇನೆ ಎಂದು ದೂರಿನಲ್ಲಿ ಸಂತ್ರಸ್ತ ಯುವತಿ ತಿಳಿಸಿದ್ದಾರೆ.
ಪೊಲೀಸರು ಆಕೆಯ ಪತಿ ಹಾಗೂ ಮಾವನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಭೋಸಾರಿ ಠಾಣೆಯ ಇನ್ ಸ್ಪೆಕ್ಟರ್ ಜಿತೇಂದ್ರ ಕದಂ ತಿಳಿಸಿದ್ದಾರೆ.