ಮಾವನ ಮಗನಿಂದ ಮದುವೆಯ ಅಮಿಷವೊಡ್ಡಿ ಪದೇ ಪದೇ ಅತ್ಯಾಚಾರ: ಬೇರೆ ಮದುವೆಗೆ ತಯಾರಾದನ ಮೇಲೆ ದೂರು
Friday, September 17, 2021
ಯಾದಗಿರಿ: ಸ್ವಂತ ಮಾವನ ಮಗನಿಂದಲೇ ಪದೇ ಪದೇ ಅತ್ಯಚಾರಕ್ಕೊಳಗಾಗಿರುವ ಯುವತಿ ಇದೀಗ ಠಾಣೆಯ ಮೆಟ್ಟಿಲೇರಿದ್ದು, ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾಳೆ.
ಕಳೆದ ಎಂಟು ತಿಂಗಳಿನಿಂದ ಮಾವನ ಮಗ ಸಂಪರ್ಕದಲ್ಲಿದ್ದ ಪದೇ ಪದೇ ತನ್ನ ಮನೆಗೆ ಬಂದು ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರಸಣಗಿ ಗ್ರಾಮದ ಹನುಮಂತ ಎಂಬ ಯುವಕನ ವಿರುದ್ಧ ಅತ್ಯಾಚಾರ ದೂರು ನೀಡಲಾಗಿದೆ.
ಸಂತ್ರಸ್ತ ಯುವತಿ ಪಾಲಕರೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಿದ್ದಳು. ಅಜ್ಜಿ ತೀರಿ ಹೋಗಿರುವ ಹಿನ್ನೆಲೆಯಲ್ಲಿ ಎಂಟು ತಿಂಗಳ ಹಿಂದೆ ಊರಿಗೆ ಬಂದಿದ್ದಳು. ಆಗ ಸಂಪರ್ಕಕ್ಕೆ ಬಂದಿರುವ ಮಾವನ ಮಗ, ಮದುವೆ ಆಗುವ ಆಮಿಷವೊಡ್ಡಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಬಳಿಕ ಯುವತಿಯ ಮನೆಯಯಾದ ಪುಣೆಗೂ ಬಂದು ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಈ ಬಗ್ಗೆ ಎರಡು ದಿನಗಳ ಹಿಂದೆ ಈತನ ವಿರುದ್ಧ ಯಾದಗಿರಿ ಮಹಿಳಾ ಠಾಣೆಯಲ್ಲಿ ಯುವತಿ ಅತ್ಯಾಚಾರ ನಡೆಸಿದ್ದಾನೆಂದು ದೂರು ದಾಖಲಿಸಿದ್ದಾಳೆ. ಮದುವೆ ನಂಬಿಸಿ ಅತ್ಯಾಚಾರ ಎಸಗಿರುವ ಹನುಮಂತ, ಬಳಿಕ ಬೇರೆ ಯುವತಿ ಜೊತೆ ಮದುವೆಯಾಗಲು ಮುಂದಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.