ಆತನೊಂದಿಗೆ ನಾನು ಏಳು ವರ್ಷ ಇದ್ದೆ, ಆಗ ನನ್ನ ಕನ್ಯತ್ವ ಕಳೆದುಕೊಂಡಿದ್ದೆ: ಬಿಗ್ ಬಾಸ್ ಸ್ಪರ್ಧಿ ನಟಿ ಸರಯೂ ರಾವ್
Thursday, September 30, 2021
ಹೈದರಾಬಾದ್: ತಮ್ಮ ಬೋಲ್ಡ್ ಮಾತುಗಳಿಂದಲೇ ಸುದ್ದಿಯಾಗುತ್ತಿದ್ದ ಟಾಲಿವುಡ್ ಸುಂದರಿ ಸರಯೂ ರಾಯ್ ಇದೀಗ ತೆಲುಗು ಬಿಗ್ಬಾಸ್ 5ನೇ ಸೀಸನ್ ಗೆ ಎಂಟ್ರಿ ಕೊಟ್ಟ ಮೊದಲ ವಾರದಲ್ಲೇ ಮನೆಯಿಂದ
ಎಲಿಮಿನೇಶನ್ ಆಗಿದ್ದಾರೆ. ಆ ಬಳಿಕ ನಡೆದ ಸಂದರ್ಶನವೊಂದರಲ್ಲಿ ಅವರು ಮತ್ತೊಂದು ಫಿಲ್ಟರ್ ಇಲ್ಲದ ಹೇಳಿಕೆ ನೀಡಿದ್ದಾರೆ.
ಕೆಲವು ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬೋಲ್ಡ್ ಆಗಿ ಮಾತನಾಡಿ ಎಲ್ಲರೂ ಕಣ್ಣರಳಿಸಿ ನೋಡುವಂತೆ ಆಗಿದೆ. ಸಂದರ್ಶನದಲ್ಲಿ ಅವರು ಏಳು ವರ್ಷಗಳ ಕಾಲ ಓರ್ವನ ಜೊತೆ ನಾನು ರಿಲೇಷನ್ಶಿಪ್ನಲ್ಲಿದ್ದೆ. ಆತನಿಗಾಗಿಯೇ ನಾನು ನನ್ನ ವೃತ್ತಿ ಜೀವನವನ್ನು ಶೇ.100 ರಷ್ಟು ಬದಿಗಿಟ್ಟಿದೆ. ಅಲ್ಲದೆ, ಆತನಿಂದ ನಾನು ನನ್ನ ಕನ್ಯತ್ವವನ್ನು ಕಳೆದುಕೊಂಡಿದ್ದೇನೆಂದು ಬೋಲ್ಡ್ ಆಗಿ ಹೇಳಿದ್ದಾರೆ.
ನಾವಿಬ್ಬರೂ ಒಂದೇ ಮನೆಯಲ್ಲಿ ಇರುವುದು ಎಲ್ಲರಿಗೂ ಗೊತ್ತಿದೆ. ನಮ್ಮ ವಿವಾಹದ ಪ್ರಸ್ತಾಪವೂ ನಡೆದಿತ್ತು. ಈ ಬಗ್ಗೆ ನಮ್ಮ ಮನೆಯವರು ಪ್ರಿಯಕರನ ಕುಟುಂಬದವರೊಂದಿಗೆ ಮಾತನಾಡಿದಾಗ ಅವರು 25 ಲಕ್ಷ ರೂ. ವರದಕ್ಷಿಣೆ ಕೇಳಿದ್ದರು. ಆ ಬಳಿಕ ಅವರು 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಮತ್ತೆ ಕೆಲ ದಿನಗಳ ಕಳೆದ ಬಳಿಕ ನಮ್ಮ ಅರ್ಧ ಆಸ್ತಿಯನ್ನೇ ಕೇಳಿದ್ದಾರೆ.
ಮದುವೆಗೂ ಮುನ್ನವೇ ಈ ರೀತಿಯಲ್ಲಿ ವರದಕ್ಷಿಣೆ ಎಂದು ಕೇಳುತ್ತಾರೆಂದರೆ, ಮದುವೆಯ ಬಳಿಕ ತಮ್ಮ ಪರಿಸ್ಥಿತಿ ಏನಾಗಬಹುದು ಎಂದು ಮೊದಲೇ ಯೋಚಿಸಿ ಮದುವೆಗೆ ಚುಕ್ಕಿ ಇಟ್ಟಿದ್ದೇನೆ. ತನಗೆ ಆತನೊಂದಿಗಿನ ಸಂಬಂಧವೊಂದೇ ಮುಖ್ಯ ಅಲ್ಲ. ನಾನು ತಪ್ಪೆಸಗಿದ್ದರೂ, ಪಾಲಕರಿಗೆ ಹೇಳದೆ ನಾನು ಏನನ್ನೂ ಮಾಡುವುದಿಲ್ಲ. ಆದ್ದರಿಂದ ಮೊದಲಾಗಿ ನಾನು ಕುಟುಂಬದೊಂದಿಗೆ ಮುಕ್ತವಾಗಿರಲು ಇಷ್ಟಪಡುತ್ತೇನೆ ಎಂದು ಸರಯೂ ಹೇಳಿದ್ದಾರೆ.