ಸಿದ್ಧಾರ್ಥ್ ಶುಕ್ಲಾ ಆತ್ಮದೊಂದಿಗೆ ಮಾತನಾಡಿದೆ ಎಂದು ವೀಡಿಯೋ ರಿಲೀಸ್ ಮಾಡಿದ ಸ್ಟೀವ್ ಹಫ್
Tuesday, September 14, 2021
ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ನಿಧನರಾದಾಗ ಅವರ ಆತ್ಮದೊಂದಿಗೆ ಮಾತನಾಡಿದ್ದೆ ಎಂದು ಹೇಳಿದ್ದ ಪ್ಯಾರಾ ನಾರ್ಮಲ್ ತಜ್ಞ ಸ್ಟೀವ್ ಹಫ್ ಅವರು ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ನಟ ಸಿದ್ಧಾರ್ಥ್ ಶುಕ್ಲಾ ಅವರೊಂದಿಗೆ ಮಾತನಾಡಿದ್ದೇನೆ ಎಂದು ಸುದ್ದಿಯಾಗಿದ್ದಾರೆ.
ಇದೀಗ ಸಿದ್ಧಾರ್ಥ್ ಶುಕ್ಲಾ ಆತ್ಮ ತನ್ನೊಂದಿಗೆ ಮಾತನಾಡುತ್ತಿದೆ ಎಂದು ಹೇಳಿರುವ ಸ್ಟೀವ್ ಹಫ್ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ. ವೀಡಿಯೋದಲ್ಲಿ ನೀವು ದೇಹವನ್ನು ತೊರೆಯುವಾಗ ಏನನ್ನು ನೋಡಿದ್ದೀರಿ ಎಂದು ಸ್ಟೀವ್ ಕೇಳಿದ್ದಾರೆ. ಆಗ ಸಿದ್ದಾರ್ಥ್ ಶುಕ್ಲಾದವರದ್ದೆನ್ನಲಾದ ಆತ್ಮ 'ತಾನು ಗಂಧರ್ವನನ್ನು ನೋಡಿದೆ' ಎಂದಿದೆ. ಬಳಿಕ ಮೃತಪಡುವಾಗ ಏನಾಯಿತೆಂದು ಸ್ಟೀವ್ ಕೇಳಿದ್ದಾರೆ. ಆಗ ಆತ್ಮ 'ತನಗೆ ಆಗ ತುಂಬಾ ನೋವಾಗಿದೆ. ಆ ಸಂದರ್ಭದಲ್ಲಿ ನಗ್ನವಾಗಿದ್ದೆ. ಇದೀಗ ಸ್ವರ್ಗದಲ್ಲಿ ತನಗೆ ಸ್ಥಳ ದೊರಕಿದೆ. ದೇವರ ಜೊತೆ ಇದ್ದೇನೆ' ಎಂದು ಆತ್ಮದ ಧ್ವನಿ ಹೇಳಿದೆ.
ಕೆಲವರು ಇದೆಲ್ಲವನ್ನೂ ನಿಜವೆಂದು ನಂಬಿದ್ದಾರೆ. ಹಲವರು ಇದೆಲ್ಲಾ ಸ್ಟೀವ್ ಹಫ್ ಹುಚ್ಚಾಟ ಎಂದು ಹೇಳುತ್ತಿದ್ದಾರೆ. ಅದೇನೇ ಆದರೂ ಸ್ಟೀವ್ ಹಫ್ ಯೂಟ್ಯೂಬ್ ಚಾನೆಲ್‌ಗೆ 19 ಲಕ್ಷ ಸಬ್ ಸ್ಕ್ರೈಬರ್ ಇದ್ದಾರೆ.