ತಂಗಿಯನ್ನೇ ಮದುವೆಯಾಗಿ ಭಾರೀ ಟೀಕೆಗೆ ಒಳಗಾಗಿದ್ದ ಬೈಕ್ ರೇಸರ್ ತಂದೆ ಆಗುತ್ತೇನೆಂದಾಗ ಮತ್ತೊಮ್ಮೆ ನೆಟ್ಟಿಗರ ಆಕ್ರೋಶ
Monday, September 20, 2021
ಲಿಸ್ಬನ್: ಪೋರ್ಚುಗಲ್ ಮೂಲದ ಬೈಕ್ ರೇಸರ್ ಮಿಗುಯೆಲ್ ಒಲಿವೆರಾ ಅವರು “ನನ್ನ ಮಲತಾಯಿ ಅಂದರೆ ತಂದೆಯ ಎರಡನೇ ಪತ್ನಿಯ ಪುತ್ರಿ ಆಂಡ್ರಿಯಾರನ್ನು ನಾನು ಪ್ರೀತಿಸಿ ಮದುವೆಯಾಗಿದ್ದು, ಇದೀಗ ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಆದರೆ, ಅವರ ಈ ಪೋಸ್ಟ್ಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದ್ದು, ನೆಗಿಟಿವ್ ಕಾಮೆಂಟ್ಗಳೇ ಹೆಚ್ಚಾಗಿ ಬಂದಿವೆ. 'ತನ್ನ ಸ್ವಂತ ತಂಗಿಯ ಜೊತೆಯೇ ವಿವಾಹ ಸಂಬಂಧ ಇಟ್ಟುಕೊಂಡಿದ್ದಲ್ಲದೆ, ಇದೀಗ ಇಬ್ಬರು ಮಗು ಮಾಡಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ. ನಿಮ್ಮಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ' ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಮೋಟೋ ಜಿಪಿ ಸ್ಟಾರ್ ಮಿಗುಯೆಲ್ ಒಲಿವೆರಾ(26) ಹನ್ನೊಂದು ವರ್ಷಗಳಿಂದ ತನ್ನ ಸ್ಟೆಪ್ ಸಿಸ್ಟರ್ ಅಥವಾ ಮಲತಂಗಿಯನ್ನು ಪ್ರೀತಿಸುತ್ತಿದ್ದರು. ಬಳಿಕ ಆಕೆಯೊಂದಿಗೆ ಮದುವೆ ಮಾಡಿಕೊಳ್ಳುತ್ತೇನೆಂದು ಹಿಂದೆ ಹೇಳಿದಾಗ ಅನೇಕರು ಹುಬ್ಬೇರಿಸಿ 'ಮಲ ತಂಗಿಯನ್ನು ಮದುವೆಯಾಗುವುದೇ' ಎಂದು ಮೂಗು ಮುರಿದಿದ್ದರು.
ಈ ಜೋಡಿ ಕಳೆದ ವರ್ಷ ಜುಲೈನಲ್ಲಿ ವಿವಾಹವಾಗಿತ್ತು. ಮದುವೆಯ ಫೋಟೋಗಳನ್ನು ಇನ್ ಸ್ಟ್ರಾಗ್ರಾಂನಲ್ಲಿ ಮಿಗುಯೆಲ್ ಒಲಿವೆರಾ ಪೋಸ್ಟ್ ಕೂಡ ಮಾಡಿದ್ದರು. ತನ್ನ ಮಲತಂಗಿಯನ್ನೇ ಆತ ಮದುವೆಯಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ಸುದ್ದಿಯಲ್ಲಿರುವ ಈ ಜೋಡಿ, ಇತ್ತೀಚೆಗೆ ಅಲ್ಟ್ರಾಸೌಂಡ್ ಮತ್ತು ಬೇಬಿ ಬಂಪ್ ಫೊಟೊವನ್ನು ಇನ್ ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿ, 'ನಮ್ಮ ಜೀವನದ ನೂತನ ಅತಿಥಿಗಾಗಿ ಕಾಯುತ್ತಿದ್ದೇವೆ' ಎಂದು ಉತ್ಸುಕರಾಗಿ ಬರೆದುಕೊಂಡಿದ್ದರು.
ಇದಕ್ಕೂ ನೆಟ್ಟಿಗರಿಂದ ನೆಗೆಟಿವ್ ಕಮೆಂಟ್ ಗಳೇ ಹೆಚ್ಚು ಬಂದಿವೆ. ಮಲ ತಂಗಿಯನ್ನು ಮದುವೆಯಾಗಿರೋದೇ ತಪ್ಪು, ಇದೀಗ ಆಕೆಯಿಂದ ಲೈಂಗಿಕ ಸಂಬಂಧ ಬೆಳೆಸಿ ಮಗು ಪಡೆಯುತ್ತಿರೋದು ಅಕ್ಷಮ್ಯ ಅಪರಾಧ ಎಂದು ಆಕ್ರೋಶಿತರಾಗಿದ್ದಾರೆ.