-->
Communal Colour to News| ತಬ್ಲೀಗಿ ಜಮಾತ್ ಸಭೆ ಪ್ರಕರಣ: ಕೆಲ ಮಾಧ್ಯಮಗಳಿಂದ ಸುದ್ದಿಗಳಿಗೆ ಕೋಮು ಬಣ್ಣ- ದೇಶಕ್ಕೆ ಕೆಟ್ಟ ಹೆಸರು ಎಂದ ಸುಪ್ರೀಂ ಕೋರ್ಟ್

Communal Colour to News| ತಬ್ಲೀಗಿ ಜಮಾತ್ ಸಭೆ ಪ್ರಕರಣ: ಕೆಲ ಮಾಧ್ಯಮಗಳಿಂದ ಸುದ್ದಿಗಳಿಗೆ ಕೋಮು ಬಣ್ಣ- ದೇಶಕ್ಕೆ ಕೆಟ್ಟ ಹೆಸರು ಎಂದ ಸುಪ್ರೀಂ ಕೋರ್ಟ್






ಸುದ್ದಿ ಮಾಧ್ಯಮಗಳು ಸುದ್ದಿಗಳಿಗೆ ಕೋಮು ಬಣ್ಣ ಹಚ್ಚುವ ಪ್ರಯತ್ನ ನಡೆಸುತ್ತಿರುವುದು ದುರದೃಷ್ಟಕರ. ಸಾಮಾಜಿಕ ಜಾಲತಾಣದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇದು ನಡೆಯುತ್ತಿದ್ದು, ಇದು ದೇಶಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.



ದೆಹಲಿಯ ನಿಜಾಮುದ್ದೀನ್ ಮಾರ್ಕಜ್‌ನಲ್ಲಿ ಕಳೆದ ವರ್ಷ ನಡೆದಿದ್ದ ತಬ್ಲೀಗಿ ಜಮಾತ್ ಸಭೆಯನ್ನು ಕೆಲವು ಸೋಷಿಯಲ್ ಮೀಡಿಯಾ ಮತ್ತು ಆನ್‌ಲೈನ್ ಸುದ್ದಿ ಮಾಧ್ಯಮಗಳು ವರದಿ ಮಾಡಿದ ರೀತಿಗೆ ಸುಪ್ರೀಂ ಕೋರ್ಟ್ ಈ ರೀತಿ ಬೇಸರ ವ್ಯಕ್ತಪಡಿಸಿದೆ.


Jamiat Ulama-I-Hind v. Union of India and connected cases


ಜಮಾತ್ ಉಲಾಮಾ ಇ ಹಿಂದ್ Vs ಭಾರತ ಸರ್ಕಾರ ಹಾಗೂ ಇತರ ಸಂಬಂಧಿ ಪ್ರಕರಣಗಳ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಪೀಠದಲ್ಲಿ ಇದ್ದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಈ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳು ಮತ್ತು ಸೋಷಿಯಲ್ ಮೀಡಿಯಾ ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲ ಮತ್ತು ಅಂತಹ ಮಾಧ್ಯಮಗಳನ್ನು ನಡೆಸುವ ಸಂಸ್ಥೆಗಳು ಪ್ರಭಾವಿ ಯಾ ಶಕ್ತಿಶಾಲಿ ವ್ಯಕ್ತಿಗಳ ಮಾತನ್ನು ಮಾತ್ರ ಕೇಳುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಆತಂಕ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article