ಹುಡುಗಿಯರನ್ನು ಕಣ್ಣಿನಲ್ಲೇ ಅತ್ಯಾಚಾರ ಮಾಡುವ ಕಾಮುಕರಿದ್ದಾರೆ: ಸದನದಲ್ಲಿ ತೇಜಸ್ವಿನಿ ಗೌಡ
Thursday, September 23, 2021
ಬೆಂಗಳೂರು: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರ ಸದನದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಮೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯರಲ್ಲದೆ ಶಾಸಕಿಯರೂ ಅತ್ಯಾಚಾರ ಪ್ರಕರಣಗಳಿಗೆ ಕುರಿತಂತೆ ತಂತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಂಕಿ-ಅಂಶಗಳನ್ನು ಮುಂದಿರಿಸಿ ಸಿದ್ದರಾಮಯ್ಯರ ಅವಧಿಯಲ್ಲೇ ರಾಜ್ಯದಲ್ಲಿ ಅತಿ ಹೆಚ್ಚು ಅತ್ಯಾಚಾರ ನಡೆದಿದೆ ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಶಾಸಕಿ ಭಾರತಿ ಶೆಟ್ಟಿ, ಸಚಿವರು ಮಾತನ್ನು ಸಮರ್ಥಿಸಿಕೊಂಡಿದ್ದಾರೆ. 'ಯುವಕರು ಸಿಗರೇಟು ಸೇದುತ್ತಾರೆ, ಮದ್ಯಪಾನ ಮಾಡುತ್ತಾರೆ, ತಾವೇಕೆ ಅದನ್ನು ಮಾಡಬಾರದೆಂಬ ಯೋಚನೆ ಯುವತಿಯರಿಗೆ ಬರುತ್ತಿದೆ. ಇದು ಅಪಾಯಕಾರಿ, ಆದ್ದರಿಂದ ಅವರನ್ನು ತಿದ್ದುವಂಥಹ ವ್ಯವಸ್ಥೆ ಶಿಕ್ಷಣದಲ್ಲೇ ಬರಬೇಕು. ಅಲ್ಲದೆ ಅತ್ಯಾಚಾರಿಗಳನ್ನು ಏಕಾಂಗಿಯಾಗಿ ಒದ್ದಾಡಿ ಒದ್ದಾಡಿ ಸಾಯುವಂತೆ ಮಾಡಬೇಕು. ಪುರುಷತ್ವವನ್ನೇ ಹರಣ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ರಾಜ್ ಕುಂದ್ರಾ ಅಶ್ಲೀಲ ವೀಡಿಯೋ ಚಿತ್ರೀಕರಣವನ್ನು ಪರೋಕ್ಷವಾಗಿ ಉದಾಹರಿಸಿ, ‘ಮುಂಬೈಯಲ್ಲಿ ಓರ್ವ ದೊಡ್ಡ ಮನುಷ್ಯ ಪೋರ್ನ್ ವೀಡಿಯೋ ತಯಾರಿಸುತ್ತಾನೆ. ಇದಕ್ಕೆ ಏನೆನ್ನಬೇಕು?. ಮಹಿಳೆ ಸರಕು ಎಂಬ ಭಾವನೆ ಬಂದಾಗಿನಿಂದ ಈ ಸಮಸ್ಯೆ ತಲೆದೋರಿದೆ. ಕಾನೂನು ಎಷ್ಟೇ ಗಟ್ಟಿಯಾಗಿದ್ದರೂ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೆಲವರು ಕೆಟ್ಟದಾಗಿ ನೋಡಿತ್ತಲೇ ಹುಡುಗಿಯರನ್ನು ಕಣ್ಣಿನಲ್ಲೇ ಅತ್ಯಾಚಾರ ಮಾಡುತ್ತಾರೆ. ಮಕ್ಕಳ ಮೇಲೆ ಪೋರ್ನ್ ಮಾಡುತ್ತಾರೆ. ತನಿಖೆ ಮಾಡುವವರು ಪ್ರಶ್ನೆ ಕೇಳುವಾಗಲೇ ನೂರು ಬಾರಿ ಅತ್ಯಾಚಾರ ಮಾಡುತ್ತಾರೆ. ಪೊಲೀಸ್ ಇಲಾಖೆಗೆ ಶಾರ್ಪ್ ಶೂಟರ್ ಮಹಿಳೆಯರು ಬರಬೇಕು ಎಂದು ಹೇಳಿದರು.