VIDEO: ನಟಿ ರಶ್ಮಿಕಾ ಮಂದಣ್ಣ ಪುರುಷನ ಒಳ ಉಡುಪಿಗೆ ಆಕರ್ಷಿತರಾಗಿರುವುದಕ್ಕೆ ಅಸಹ್ಯಪಟ್ಟ ಅಭಿಮಾನಿಗಳು
Sunday, September 26, 2021
ಮುಂಬೈ: ನಟಿ ರಶ್ಮಿಕಾ ಮಂದಣ್ಣ ಸದಾ ಯಾವುದಾದರೊಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಅವರು ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ತೊಟ್ಟಿರುವ ಕೆಂಪು ಬಣ್ಣದ ಡ್ರೆಸ್ ದೀಪಿಕಾ ಪಡುಕೋಣೆ ವಸ್ತ್ರದ ಮಾದರಿಯಲ್ಲಿಯೇ ಕಾಪಿ ಮಾಡಲಾಗಿದೆ ಎಂದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರು ಬಾಲಿವುಡ್ ನಟ ವಿಕ್ಕಿ ಕೌಶಲ್ ಒಳ ಉಡುಪುವಿಗೆ ಸಂಬಂಧಿಸಿದಂತೆ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಅಲ್ಲದೆ ರಶ್ಮಿಕಾ ಕೆಲ ಅಭಿಮಾನಿಗಳ ಅಸಹನೆಗೂ ಕಾರಣರಾಗಿದ್ದಾರೆ.
ಜಾಹೀರಾತು ಮೂಲಕವೂ ಕೋಟಿಗಟ್ಟಲೆ ಸಂಪಾದಿಸುತ್ತಿರುವ ರಶ್ಮಿಕಾ ಮಂದಣ್ಣ ಜಾಹಿರಾತಿಗೋಸ್ಕರವೇ ವಿಕ್ಕಿ ಕೌಶಲ್ ಅವರ ಒಳ ಉಡುಪು ನೋಡಿ ಆಕರ್ಷಿತರಾಗಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿಕ್ಕಿ ಕೌಶಲ್ ಜೊತೆಯಲ್ಲಿ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ರಶ್ಮಿಕಾ ಯೋಗ ಟೀಚರ್ ಆಗಿ ಕಾಣಿಸಿಕೊಂಡಿದ್ದಾರೆ.
ವಿಕ್ಕಿ ಕೌಶಲ್ ರಶ್ಮಿಕಾ ಯೋಗ ವಿದ್ಯಾರ್ಥಿಯಾಗಿದ್ದಾರೆ. ಯೋಗ ಮಾಡುವ ಸಂದರ್ಭದಲ್ಲಿ ವಿಕ್ಕಿ ಎರಡೂ ಕೈಗಳನ್ನು ಮೇಲೆತ್ತುತ್ತಾರೆ. ಆ ಸಂದರ್ಭ ವಿಕ್ಕಿ ಸೊಂಟದ ಭಾಗದಲ್ಲಿ ಅವರ ಒಳಉಡುಪಿನ ಪಟ್ಟಿ ಕಾಣಿಸುತ್ತದೆ. ರಶ್ಮಿಕಾ ಅದನ್ನು ಕಂಡು ಆಕರ್ಷಿತರಾಗಿ ಯೋಗ ಹೇಳಿಕೊಡುವುದನ್ನೇ ನಿಲ್ಲಿಸಿ, ಒಂದು ಕ್ಷಣ ಮೈಮರೆತು ಬಿಡುತ್ತಾರೆ.
ಇದೇ ಬ್ರ್ಯಾಂಡ್ ನ ನಿಕ್ಕರ್ ಜಾಹೀರಾತಿನಲ್ಲಿ ಯೋಗ ಕ್ಲಾಸ್ ನಡೆಯುವಲ್ಲಿಗೆ ವಿಕ್ಕಿ ಕೌಶಲ್ ಬರುತ್ತಾರೆ. ಅವರ ನಿಕ್ಕರ್ ನೋಡುವ ಸಲುವಾಗಿಯೇ ರಶ್ಮಿಕಾ ಯೋಗ ಮ್ಯಾಟ್ ಅನ್ನು ಭಾರೀ ಎತ್ತರದ ಜಾಗದಲ್ಲಿ ಇಟ್ಟಿರುತ್ತಾರೆ. ಅದನ್ನು ತೆಗೆದುಕೊಳ್ಳಲು ವಿಕ್ಕಿ ಕೈ ಎತ್ತಿದಾಗ ಒಳಉಡುಪಿನ ಪಟ್ಟಿಯನ್ನು ಕಂಡಾಗ ರಶ್ಮಿಕಾ ಅದನ್ನು ನೋಡಿ ಖುಷಿಪಡುತ್ತಾರೆ.
ಇದೊಂದು ಅಸಹ್ಯ ಹುಟ್ಟಿಸುವ ಜಾಹಿರಾತು ಎಂದು ಸ್ವತಃ ರಶ್ಮಿಕಾ ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದ್ದಾರೆ. ಯಾವ ಮಹಿಳೆಯೂ ಪುರುಷರ ಒಳಉಡುಪು ನೋಡಿ ಆಕರ್ಷಿತರಾಗುತ್ತಾರೆಯೇಎಂದು ಪ್ರಶ್ನಿಸಿದ್ದಾರೆ. ಹೆಣ್ಣುಮಕ್ಕಳ ಮನಸ್ಥಿತಿಯನ್ನು ಎಷ್ಟೊಂದು ಕೀಳಾಗಿ ಬಿಂಬಿಸಲಾಗಿದೆ. ಆದರೆ ಆ ರೀತಿಯಲ್ಲಿ ನಟಿಸಿದ ರಶ್ಮಿಕಾಗೆ ಬುದ್ಧಿ ಇರಲಿಲ್ಲವೇ ಎಂದಿದ್ದಾರೆ ಕೆಲವರು.
ಒಂದು ವೇಳೆ ಇದೇ ಜಾಹೀರಾತಿನಲ್ಲಿ ಮಹಿಳೆಯ ಜಾಗದಲ್ಲಿ ಪುರುಷ ಇದ್ದು, ಆಕೆಯ ಒಳಉಡುಪು ಕಂಡು ಪುರುಷನೇ ಈ ರೀತಿ ವರ್ತಿಸಿದ್ದಲ್ಲಿ ಅದು ವಿವಾದಕ್ಕೆ ಕಾರಣ ಆಗುತ್ತಿರಲಿಲ್ಲವೆ ಎಂಬ ಪ್ರಶ್ನೆಗಳೂ ಬಂದಿವೆ. ಅದೇ ರೀತಿ ದುಡ್ಡು ಕೊಟ್ಟಲ್ಲಿ ಒಳ ಉಡುಪುವಿಗೆ ಆಕರ್ಷಿತರಾಗಿ ನೋಡುವುದು ಮಾತ್ರವಲ್ಲದೇ ಏನು ಮಾಡಲು ಇಂಥವರು ಹೇಸುವುದಿಲ್ಲ ಎಂದು ಅನೇಕ ಮಂದಿ ಕಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.