ಈ ವಾರ ಮಂಗಳೂರಿನಲ್ಲಿ ವಾಹನ ಚಲಾಯಿಸುವವರ ಗಮನಕ್ಕೆ- ಪ್ರತಿ ದಿನ ನಡೆಯುತ್ತದೆ ಒಂದೊಂದು ತಪಾಸಣೆ- ಅದು ಏನು ? ಈ ವಿಡಿಯೋ ನೋಡಿ
Monday, September 27, 2021
ಮಂಗಳೂರು: ವಾಹನಗಳು ಚಲಾಯಿಸುವ ವೇಳೆ ಅಗತ್ಯ ದಾಖಲೆಪತ್ರಗಳು, ಇನ್ಸೂರೆನ್ಸ್, ಎಮಿಷನ್ ಟೆಸ್ಟ್ ಇರುವುದು ಕಡ್ಡಾಯ. ಅದರ ಜೊತೆಗೆ ಕಾರುಗಳಲ್ಲಿ ಟಿಂಟ್ ಗ್ಲಾಸ್ ಅಳವಡಿಸುವುದು, ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಬಳಸುವುದು ಕಡ್ಡಾಯ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2 ವರೆಗೆ ಪ್ರತಿದಿನ ಒಂದೊಂದು ವಿಭಾಗದ ತಪಾಸಣೆ ನಡೆಸಲು ಮಂಗಳೂರು ಪೊಲೀಸ್ ಇಲಾಖೆ ಸಜ್ಜಾಗಿದೆ. ಅದು ಯಾವುದು ಎಂಬುದು ಇಲ್ಲಿ ಮಾಹಿತಿ ಇದೆ. ಜೊತೆಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ನೀಡಿರುವ ಮಾಹಿತಿಯ ವಿಡಿಯೋ ಇಲ್ಲಿದೆ.