No meat-vhp appeal- ಗಣೇಶ ಚತುರ್ಥಿ, ಗಾಂಧಿ ಜಯಂತಿ ಮಾಂಸ ರಹಿತ ದಿನವಾಗಿ ಆಚರಣೆ; ವಿಹಿಂಪ ಮನವಿ
Thursday, September 9, 2021
ಗಣೇಶ ಚತುರ್ಥಿ, ಗಾಂಧಿ ಜಯಂತಿ ಮಾಂಸ ರಹಿತ ದಿನವಾಗಿ ಆಚರಣೆ ಮಾಡುವಂತೆ ವಿಹಿಂಪ ಮನವಿ ಮಾಡಿದೆ.
ಕರ್ನಾಟಕ ಸರ್ಕಾರದ 11 ದಿನಗಳನ್ನು ಮಾಂಸಾಹಾರ ರಹಿತ ದಿನಗಳಾಗಿ ಆಚರಿಸುವಂತೆ (ಆದೇಶ ಸಂಖ್ಯೆ -. HUD. 65 CGL-78 ತಾರೀಕು - 08.01.1979 ) ಆದೇಶ ನೀಡಿದೆ. ಆ ಆದೇಶದಂತೆ ಬರುವ ಸೆಪ್ಟೆಂಬರ್ 10 ನೇ ತಾರೀಕು ಗಣೇಶ ಚತುರ್ಥಿಯಂದು ಮತ್ತು ಒಕ್ಟೋಬರ್ 2 ಗಾಂಧಿಜಯಂತಿಯಂದು ಮಾಂಸಾಹಾರ ರಹಿತ ದಿನಗಳಾಗಿ ಆಚರಿಸುವಂತೆ ಆದೇಶ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.
ಈ ದಿನದಂದು ಕಸಾಯಿಖಾನೆಗಳನ್ನು ಮತ್ತು ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಕಮಿಷನರ್, ಪಂಚಾಯತ್, ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಗಣೇಶ ಚತುರ್ಥಿಯಂದು ಮತ್ತು ಗಾಂಧಿಜಯಂತಿಯಂದು ಮಾಂಸ ರಹಿತ ದಿನವನ್ನಾಗಿ ಆಚರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ವಿಶ್ವ ಹಿಂದು ಪರಿಷತ್ ಜಿಲ್ಲಾ ಗೋರಕ್ಷ ಪ್ರಮುಖ್ ಪ್ರದೀಪ್ ಪಂಪುವೆಲ್ ಆಗ್ರಹಿಸಿದ್ದಾರೆ.