-->
VIDEO: ಖ್ಯಾತ ನಟ ಧರಮ್ ತೇಜ್ಗೆ ಅಪಘಾತ.... ವೈರಲ್ ಆಯ್ತು ಆಕ್ಸಿಡೆಂಟ್ನ ಭಯಾನಕ ವಿಡಿಯೋ..

VIDEO: ಖ್ಯಾತ ನಟ ಧರಮ್ ತೇಜ್ಗೆ ಅಪಘಾತ.... ವೈರಲ್ ಆಯ್ತು ಆಕ್ಸಿಡೆಂಟ್ನ ಭಯಾನಕ ವಿಡಿಯೋ..

 ಹೈದರಾಬಾದ್​: ಖ್ಯಾತ ತೆಲಗು ನಟ ಸಾಯಿ ಧರಮ್ ತೇಜ್ ಅವರಿಗೆ ಹೈದರಾಬಾದ್​ನ ಮಾದಾಪುರದ ಬಳಿ ಅಪಘಾತವಾಗಿದ್ದು,ನಟ ಗಂಭೀರವಾಗಿ ಗಾಯಗೊಂಡಿದ್ದಾರೆ. 

 ಈ ಘಟನೆ ಶುಕ್ರವಾರ ಸಂಜೆ ನಡೆದಿದೆ. ಧರಮ್​ ತೇಜ್​ ಹೆಲ್ಮೆಟ್​ ಧರಿಸಿದ್ದರಿಂದ ಬದುಕುಳಿದಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.  ಅಪಘಾತದ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್​ ಆಗಿದೆ. ಈ ದೃಶ್ಯದಲ್ಲಿ ವೇಗವಾಗಿ ಬರುತ್ತಿದ್ದ ಬೈಕ್​ ಇದ್ದಕ್ಕಿದ್ದಂತೆ ಸ್ಕಿಡ್​ ಆಗುತ್ತದೆ. ಧರಮ್ ತೇಜ್ ತುಂಬಾ ವೇಗವಾಗಿ ಬೈಕ್​ನಲ್ಲಿ ಬರುತ್ತಿದ್ದರು. ಈ ಸಂದರ್ಭ ನಿಯಂತ್ರಣ ತಪ್ಪಿ ಬೈಕ್​ ಸ್ಕಿಡ್​ ಆಗಿ ಬಿದ್ದಿದ್ದಾರೆಂದು ತಿಳಿದುಬಂದಿದೆ. 

ಈ ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹೈದರಾಬಾದ್​ ಪೊಲೀಸರು, ಹೆಲ್ಮೆಟ್​ ಧರಿಸಿದ್ದರಿಂದ ನಟ ಧರಮ್​ ತೇಜ್​ಗೆ ಹೆಚ್ಚಿನ ಅನಾಹುತ ಆಗಿಲ್ಲ ಎಂದಿದ್ದಾರೆ. ಸದ್ಯ ಸಿಸಿಟಿವಿ ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹೇಗೆ ಅಪಘಾತ ಸಂಭವಿಸಿತು ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಈ ಬಗ್ಗೆ ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Ads on article

Advertise in articles 1

advertising articles 2

Advertise under the article