ಬಂಟ್ವಾಳ; ರಸ್ತೆಯ ಮೇಲೆ ಮಲಗಿದ ವ್ಯಕ್ತಿಯ ಮೇಲೆ ಹರಿದ ಸ್ಕೂಟರ್- ವ್ಯಕ್ತಿ ಮೃತ್ಯು, ಭೀಕರ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆ
Tuesday, September 14, 2021
ಬಂಟ್ವಾಳ: ರಾತ್ರಿ ರಸ್ತೆ ಮಧ್ಯೆ ಮಲಗಿರುವ ವ್ಯಕ್ತಿಯ ಮೇಲೆಯೇ ದ್ವಿಚಕ್ರ ವಾಹನ ಹರಿದ ಪರಿಣಾಮ ಆತ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ಕೋಯನಜಲು ಎಂಬಲ್ಲಿ ನಡೆದಿದೆ. ಇದರ ಸಂಪೂರ್ಣ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ.
ಸಜೀಪ ಮುನ್ನೂರು ನಿವಾಸಿ ಕೃಷ್ಣ ಮೂರ್ತಿ ಹೇರಳ (50)ಮೃತ ವ್ಯಕ್ತಿ.
ಮೆಲ್ಕಾರ್ ಸಮೀಪದ ಪೆಟ್ರೋಲ್ ಬಂಕ್ ಬಳಿ ನಡೆದುಕೊಂಡು ಬಂದಿರುವ ಮೃತ ಕೃಷ್ಣಮೂರ್ತಿ ಹೇರಳ ರಸ್ತೆಯ ಮಧ್ಯದಲ್ಲಿ ಮಲಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಅವರು ಹಾಗೆ ಮಲಗಿದ ಕೆಲವೇ ಕ್ಷಣದಲ್ಲಿ ದ್ವಿಚಕ್ರ ವಾಹನವೊಂದು ಮಲಗಿರುವ ಅವರ ಮೇಲೆಯೇ ಹರಿದಿದೆ.
ಈ ಸಂದರ್ಭ ದ್ವಿಚಕ್ರ ವಾಹನ ಸವಾರ ಕೂಡ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಅಪಘಾತ ನಡೆದ ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೃಷ್ಣ ಮೂರ್ತಿ ಹೇರಳ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ. ಸ್ಕೂಟರ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.