ಬೇಕರಿಯಲ್ಲಿ ಕೆಲಸ ಮಾಡುವವರು ತಿನ್ನುವ ಆಹಾರವನ್ನು ಈ ರೀತಿ ಪ್ಯಾಕ್ ಮಾಡ್ತಾರ- ಕಾರ್ಮಿಕ ಟೋಸ್ಟ್ ನೆಕ್ಕುವ ವಿಡಿಯೋ ಹಾಕಿ ಬಂಧಿಸಲು ಆಗ್ರಹಿಸಿದ ನಟಿ (VIDEO)
Sunday, September 19, 2021
ಮುಂಬಯಿ:
ಬಾಲಿವುಡ್ ನಟಿ ರವೀನಾ ಟಂಡನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಬೇಕರಿಯಲ್ಲಿನ ಅಸ್ವಚ್ಚತೆಯ ಬಗ್ಗೆ ಧ್ವನಿಯೆತ್ತಿದ್ದಾರೆ.
ಬೇಕರಿಯಲ್ಲಿ
ತಿನಿಸುಗಳನ್ನು ಪ್ಯಾಕ್ ಮಾಡುವ ಮುನ್ನ ಅದನ್ನು ತುಳಿಯುವುದು ಮತ್ತು ಟೇಸ್ಟ್ ನೋಡುವ ಈ ವಿಡಿಯೋ ಹಾಕಿ
ಇಂತವರನ್ನು ಜೈಲಿಗಟ್ಟಬೇಕು ಎಂದು ಆಗ್ರಹಿಸಿದ್ದಾರೆ..
ನಟಿ ರವೀನಾ
ಟಂಡನ್ ತಮ್ಮ ಇನ್ಸ್ಟಾಗ್ರಾಮ್
ಸ್ಟೋರಿಯಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುವ ಕಾರ್ಮಿಕನೊಬ್ಬ ತಿನಿಸುಗಳನ್ನು ಪ್ಯಾಕ್
ಮಾಡುವ ಮುನ್ನ ತನ್ನ ಪಾದವನ್ನು ಬೇಕೆಂದೆ ಟೋಸ್ಟ್
ನ ಮೇಲಿಡುವುದು
ಕಂಡುಬಂದಿದೆ. ಇದೇ ವೇಳೆ ಮತ್ತೊಬ್ಬ ಕೆಲಸಗಾರ ಟೋಸ್ಟ್ ಗಳನ್ನು ನೆಕ್ಕುವ
ದೃಶ್ಯವು ಇದರಲ್ಲಿದೆ
ಈ ವಿಡಿಯೋದ ಕೆಳಗೆ HOPE THEY GET CAUGHT AND ARE BIHIND BARS FOREVER" ಎಂದು ಬರೆದುಕೊಂಡಿದ್ದಾರೆ. •