VIDEO: ಚಲಿಸುತ್ತಿದ್ದ ಬಸ್ ಗೆ ದಾಳಿ ಮಾಡಿದ ಆನೆ- ಪ್ರಯಾಣಿಕರು ಕಕ್ಕಾಬಿಕ್ಕಿ- ಭೀತಿ ಮೂಡಿಸುವ ಈ ವಿಡಿಯೋ ನೋಡಿ
Sunday, September 26, 2021
ಚಾಮರಾಜನಗರ:
ಚಲಿಸುತ್ತಿದ್ದ ಬಸ್ ವೊಂದಕ್ಕೆ ಆನೆಯೊಂದು ಅಡ್ಡ ಬಂದು
ಗ್ಲಾಸ್ ಒಡೆದು ಹಾಕಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ತಮಿಳುನಾಡು
ಸಾರಿಗೆ ಬಸ್ಸೊಂದಕ್ಕೆ ಆನೆ ಅಡ್ಡ ಹಾಕಿ ಎದುರಿನ ಗ್ಲಾಸ್
ಒಡೆದು ಹಾಕಿದೆ. ಈ ಸಂದರ್ಭದಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ತಮಿಳುನಾಡು
ರಾಜ್ಯ ಮತ್ತು ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿ
ಈ ಘಟನೆ ನಡೆದಿದೆ.
ಚಾಮರಾಜ ನಗರ
ತಾಲೂಕಿನ ಗುಂಡ್ಲುಪೇಟೆಯಿಂದ ನೀಲಗಿರಿ, ನೀಲಗಿರಿಯಿಂದ ಮೆಟ್ಟುಪಾಲ್ಯಂಗೆ ತೆರಳುವ ತಮಿಳುನಾಡು ರಾಜ್ಯದ
ಸಾರಿಗೆ ಸಂಸ್ಥೆ ಬಸ್ಸಿಗೆ ಆನೆ ಅಡ್ಡ ಹಾಕಿದೆ. ಕೊಟೈಗಿರಿ ಎಂಬಲ್ಲಿ ಆನೆ ಅಡ್ಡ ತನ್ನ ದಂತದಿಂದ 2 ಬಾರಿ ಬಸ್ಸಿಗೆ ಗುದ್ದಿದ್ದರಿಂದ ಬಸ್ ನ ಎದುರು ಭಾಗದ ಗ್ಲಾಸ್
ಪುಡಿ-ಪುಡಿಯಾಗಿದೆ.
ಆನೆಯ ದಾಳಿಗೆ ಬೆಚ್ಚಿಬಿದ್ದ ಬಸ್ ಚಾಲಕ ಅಲ್ಲಿಂದ ಎದ್ದು
ಪ್ರಯಾಣಿಕರ ಬಳಿ ಬಂದು ನಿಂತುಕೊಂಡಿದ್ದಾರೆ . ಬಳಿಕ ಆನೆ ಕಾಡಿನೊಳಕ್ಕೆ ತೆರಳಿದೆ. ನಂತರ ಬಳಿಕ ಬಸ್ ಪ್ರಯಾಣ ಮುಂದುವರಿಸಿದೆ. ಈ ಭಯಾನಕ ದೃಶ್ಯದ ವಿಡಿಯೋ ನೋಡಿ