Youth of GSB - ಮತ್ತೊಂದು ಐತಿಹಾಸಿಕ ದಿನ ಆಚರಿಸಿದ ಯೂತ್ ಆಫ್ ಜಿ ಎಸ್ ಬಿ.: ಲಡಾಕ್ ನಲ್ಲಿ ಸಿಂಧೂ ನದಿ ಪೂಜೆ
ಮತ್ತೊಂದು ಐತಿಹಾಸಿಕ ದಿನ ಆಚರಿಸಿದ ಯೂತ್ ಆಫ್ ಜಿ ಎಸ್ ಬಿ.: ಲಡಾಕ್ ನಲ್ಲಿ ಸಿಂಧೂ ನದಿ ಪೂಜೆ
ಇದೇ ಪ್ರಪ್ರಥಮ ಬಾರಿಗೆ ಗೌಡ ಸಾರಸ್ವತ ಬ್ರಾಹ್ಮಣರ ದೊಡ್ಡ ಸಂಖ್ಯೆಯ ಪ್ರವಾಸಿಗರ ಗುಂಪು ಯೂಥ್ ಆಫ್ ಜಿ ಎಸ್ ಬಿ ನೇತೃತ್ವದಿಂದ ಲಢಾಕ್ ಪ್ರಾಂತ್ಯದ ಸಪ್ತ ಪವಿತ್ರ ನದಿಗಳಲ್ಲಿ ಒಂದಾಗಿರುವ ಸಿಂಧೂ ಮಾತೆಯ ಪೂಜೆ ನೆರವೇರಿಸಲಾಯಿತು.
ಕೆಲ ಸಮಯ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಲಢಾಕ್ ನ ಸಿಂಧೂ ನದಿ ಪೂಜೆ ನೆರವೇರಿಸಿದ್ದು ಈ ಮೂಲಕ ಲಡಾಕ್ ಗೆ ಆಗಮಿಸುವ ಪ್ರವಾಸಿಗರು ಕೂಡ ಸಿಂಧೂ ದರ್ಶನ ಮಾಡಬೇಕೆಂಬ ಉದ್ದೇಶ ಹೊಂದಿದ್ದರು.
ಇದರಿಂದ ಪ್ರೇರಣೆ ಗೊಂಡ ಯೂಥ್ ಆಫ್ ಜಿ ಎಸ್ ಬಿ ತಂಡ ಅತ್ಯಂತ ಪ್ರಾಚೀನ ಹಾಗೂ 3180 ಕಿ ಮೀ ಹರಿಯುವ ಅತೀ ದೊಡ್ಡ ನದಿ ಸಿಂಧೂ ನದಿ ತಟದಲ್ಲಿ ಕಲ್ಪೋಕ್ತ ಪೂಜೆ ಹಮ್ಮಿಕೊಂಡಿತ್ತು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಂಧೂ ತಟದಲ್ಲಿ ಪೂಜೆ ಮಾಡಿದ್ದು ಜಿ ಎಸ್ ಬಿ ಸಮಾಜದ ಇತಿಹಾಸದಲ್ಲಿಯೇ ಪ್ರಥಮ ಎಂದು ಹೇಳಲಾಗುತ್ತಿದೆ.
160 ಪ್ರವಾಸಿಗರು ಕಾಶ್ಮೀರ, ಲಢಾಕ್ ಪ್ರವಾಸ ಕೈಗೊಂಡಿದ್ದು ಯೂಥ್ ಆಫ್ ಜಿ ಎಸ್ ಬಿ ಪ್ರಮುಖರಾಗಿರುವ ಮಂಗಲ್ಪಾಡಿ ನರೇಶ್ ಶೆಣೈ ನೇತೃತ್ವ ವಹಿಸಿದ್ದಾರೆ.
ಮಂಜೇಶ್ವರ ಮದನಂತೇಶ್ವರ ದೇವಳದ ಉಪಾಧ್ಯಕ್ಷರಾಗಿರುವ ಯೋಗೀಶ್ ಕಾಮತ್ ಪೂಜೆಯಲ್ಲಿ ಪ್ರಮುಖರಾಗಿ ಭಾಗವಹಿಸಿ,ಮಂಗಳೂರು ಕಾತ್ಯಾಯನೀ ಮಠದ ವೇದಮೂರ್ತಿ ಗೋಪಾಲಕೃಷ್ಣ ಭಟ್ ಅವರು ಪೂಜೆ ನೆರವೇರಿಸಿದರು.