ಪತ್ನಿ ಸೇರಿದಂತೆ 10 ಪ್ರೇಯಸಿಯರನ್ನು ತೃಪ್ತಿಪಡಿಸಲು ಈತ ಮಾಡಿದ್ದೇನು ಗೊತ್ತೇ?: ಈತನ ಕೃತ್ಯದಿಂದ ಪೊಲೀಸರಿಗೇ ಶಾಕ್
Monday, October 25, 2021
ಘಾಜಿಯಾಬಾದ್: ಇಲ್ಲೊಬ್ಬ ಪತ್ನಿ ಸೇರಿದಂತೆ ತನ್ನ ಬರೋಬ್ಬರಿ 10 ಪ್ರೇಯಸಿಯರನ್ನು ತೃಪ್ತಿಪಡಿಸಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಅಂತದ್ದೇನು ಮಾಡಿದ್ದೇನು ಗೊತ್ತೇ?.
ಉತ್ತರ ಪ್ರದೇಶದ ಘಾಜಿಯಾಬಾದ್ ನಿವಾಸಿಯಾಗಿರುವ ಇರ್ಫಾನ್ ಅಲಿಯಾಸ್ ಉಜಾಲ್ ವಿವಾಹಿತನಾಗಿದ್ದರೂ ಸುಮಾರು 10 ಪ್ರೇಯಸಿಯರನ್ನು ಹೊಂದಿದ್ದ. ಎಲ್ಲರನ್ನೂ ತೃಪ್ತಿಪಡಿಸಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅಚ್ಚರಿಯ ವಿಚಾರವೆಂದರೆ ಈತನ ಕೃತ್ಯಕ್ಕೆ ಪತ್ನಿಯೇ ಸಾಥ್ ಕೊಡುತ್ತಿದ್ದಳಂತೆ. ಇದೀಗ ಪೊಲೀಸರು ಅವಳನ್ನೂ ಪೊಲೀಸರು ಬಂಧಿಸಿದ್ದಾರೆ.
ಒಂದೆಡೆ ಪತ್ನಿ, ಇನ್ನೊಂದೆಡೆ 10 ಮಂದಿ ಪ್ರೇಯಸಿಯರು. ಆತನಿಗೆ ಎಲ್ಲರನ್ನೂ ಒಟ್ಟಿಗೆ ನಿಭಾಯಿಸಬೇಕಿತ್ತು. ಎಲ್ಲರನ್ನೂ ಸಂತೃಪ್ತಿ ಪಡಿಸಬೇಕಿತ್ತು. ಅದಕ್ಕಾಗಿ ಶ್ರೀಮಂತನಂತೆ ಪೋಸ್ ಕೊಡುತ್ತಿದ್ದ. ಇದರಿಂದ ಈತನಿಗೆ ಸುಲಭವಾಗಿ ಯುವತಿಯರು ಮರುಳಾಗುತ್ತಿದ್ದುದರು. ಅವರೆಲ್ಲರನ್ನೂ ಒಟ್ಟಿಗೇ ನಿಭಾಯಿಸುತ್ತಿದ್ದ ಕೂಡಾ.
ಆದರೆ ಅವರನ್ನು ಸಂತೃಪ್ತಿ ಪಡಿಸಲು ಮಾತ್ರ ಆತ ಸಿರಿವಂತರ ಮನೆಗೆ ಕನ್ನ ಹಾಕುತ್ತಿದ್ದ. ಈತನ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದರೂ ಆತ ಸಿಕ್ಕಿಬಿದ್ದಿರಲಿಲ್ಲ. ಕೊನೆಗೂ ಈ ಖತರ್ನಾಕ್ ಖದೀಮನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತನಿಖೆ ವೇಳೆ ಆತ ತನ್ನದೇನೂ ತಪ್ಪಿಲ್ಲ, ತಾನು 10 ಮಂದಿಯ ಆಸೆಯನ್ನು ಪೂರೈಸುವುದಕ್ಕಾಗಿ ಈ ರೀತಿ ಕನ್ನ ಹಾಕುತ್ತಿದ್ದೆ ಎಂದು ಹೇಳಿದ್ದಾನೆ ಈ ಭೂಪ. ಸದ್ಯ ಈತನಿಂದ ಚಿನ್ನಾಭರಣ,ವಜ್ರ ಸೇರಿದಂತೆ 1 ಕೋಟಿ ರೂ. ಮೌಲ್ಯದ ಜಾಗ್ವಾರ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಶಾಕಿಂಗ್ ಕಾದಿತ್ತು. ಅದೇನೆಂದರೆ ಈತ ಕಳವು ಕೃತ್ಯ ನಡೆಸಿರುವ ಮನೆಗಳ ಪೈಕಿ ಅತ್ಯಂತ ಕಠಿಣ ಭದ್ರತೆ ಹೊಂದಿರುವ ಗೋವಾ ರಾಜ್ಯಪಾಲರ ಮನೆ ಹಾಗೂ ನ್ಯಾಯಾಧೀಶರ ಮನೆಯೂ ಒಳಗೊಂಡಿತ್ತು ಎಂದು ಕೇಳಿ ಪೊಲೀಸರು ಸುಸ್ತಾಗಿದ್ದಾರೆ.
ಗೆಳತಿಯರನ್ನು ಸಂತೃಪ್ತಿಪಡಿಸುವ ಉದ್ದೇಶದಿಂದ ಈತ ತನ್ನೊಂದಿಗೆ ಬೇರೆ ಯಾರನ್ನೂ ದರೋಡೆಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಹೀಗೊಂದು ವೇಳೆ ಯಾರನ್ನಾದರೂ ಕರೆದೊಯ್ದರೆ ಅವರಿಗೂ ಪಾಲು ಕೊಡಬೇಕಾಗುತ್ತದೆ ಎನ್ನುವ ಕಾರಣ ನೀಡಿದ್ದ. ಈತ ಗೋವಾ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದಲ್ಲಿ ದರೋಡೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಈ ರೀತಿ ದರೋಡೆ ಮಾಡಲು ಈತನಿಗೆ ಪತ್ನಿಯೂ ಸಹಕಾರ ನೀಡುತ್ತಿದ್ದಳಂತೆ. ಇದೀಗ ಆಕೆಯನ್ನು ಬಂಧಿಸಿರುವ ಪೊಲೀಸರು 10 ಮಂದಿ ಗರ್ಲ್‌ಫ್ರೆಂಡ್ಸ್ ಪೈಕಿ ಒಬ್ಬಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.