
ಅಡ್ಯಾರ್ ಹೋಟೆಲ್ ನ ತ್ಯಾಜ್ಯ ರಸ್ತೆಗೆ ಎಸೆತ- 10 ಸಾವಿರ ದಂಡ ವಿಧಿಸಿದ ಗ್ರಾ.ಪಂ (Video)
Wednesday, October 6, 2021
ಮಂಗಳೂರು: ಮಂಗಳೂರಿನ ಅಡ್ಯಾರ್ ನಲ್ಲಿರುವ ಹೋಟೆಲ್ ವೊಂದು ಹೋಟೆಲ್ ನ ತ್ಯಾಜ್ಯವನ್ನು ರಸ್ತೆಗೆ ಎಸೆದಿದ್ದು, ಇದಕ್ಕೆ ಗ್ರಾಪಂ 10 ಸಾವಿರ ರೂ ದಂಡ ವಿಧಿಸಿದ ಘಟನೆ ನಡೆದಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ಹೊಟೇಲ್ ತ್ಯಾಜ್ಯವನ್ನು ತ್ಯಾಜ್ಯ ಸಂಗ್ರಹಣೆಗೆ ಬರುವ ವಾಹನಕ್ಕೆ ನೀಡದೆ ರಸ್ತೆ ಬದಿ ಎಸೆಯಲಾಗಿತ್ತು. ಇದನ್ನು ಅಡ್ಯಾರ್ ಗ್ರಾ.ಪಂ ನ ಸಿಬ್ಬಂದಿಗಳು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಇದರ ಬಗ್ಗೆ ಹೋಟೆಲ್ ನವರಲ್ಲಿ ಕೇಳಿದಾಗ ನಾವು ಎಸೆದಿಲ್ಲ ಎಂದು ವಾದ ಮಾಡಿದ್ದಾರೆ.
ಈ ವೇಳೆ ತ್ಯಾಜ್ಯವನ್ನು ತೆಗೆದುಕೊಂಡ ಗ್ರಾಪಂ ಸಿಬ್ಬಂದಿಯು ಆ ತ್ಯಾಜ್ಯವನ್ನು ಹೋಟೆಲ್ ನ ಎದುರು ಸುರಿದು ಪರಿಶೀಲನೆ ನಡೆಸಿದಾಗ ಅದರಲ್ಲಿ ಹೋಟೆಲ್ ನ ಬಿಲ್ ಗಳು ಇರುವುದು ಕಂಡುಬಂದಿದೆ. ಕೂಡಲೇ ಹೋಟೆಲ್ ಗೆ 10 ರೂ ದಂಡವನ್ನು ಗ್ರಾ.ಪಂ ವಿಧಿಸಿದೆ.