
ಅಬ್ಬಾ! ಈ ಕುಂಬಳಕಾಯಿ ತೂಕ 1226 ಕೆ ಜಿ!
Friday, October 29, 2021
ಇಟಲಿಯ ಕೃಷಿಕರೊಬ್ಬರು ಬೃಹತ್ ಸಿಹಿ ಕುಂಬಳಕಾಯಿ ಬೆಳೆದು ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.
ದೈತ್ಯಕಾರದ ಕುಂಬಳಕಾಯಿ ಬೆಳೆದಿರುವ ಈ ಕೃಷಿಕ ಇದೀಗ ಫೇಮಸ್ ಆಗಿದ್ದಾರೆ. ಇವರು ಇಟಲಿಯ ಟಸ್ಕನಿಯ ಚಿಯಾಂಟಿಯಲ್ಲಿರುವ ರಾಡ್ಡಾದ ಕಮ್ಯೂನ್ ಗ್ರಾಮದ ರೈತ ರಾಗಿದ್ದಾರೆ. ಸ್ಟೆಫಾನೊ ಕಟ್ರುಪಿ ಎಂಬ ಈ ರೈತ ಸುಮಾರು 2008ರಿಂದ ಈ ಸಿಹಿ ಕುಂಬಳಕಾಯಿ ಬೆಳೆದಿದ್ದಾರಂತೆ. ಸೆಪ್ಟೆಂಬರ್ 26ರಂದು ಪಿಸಾ ಬಳಿಯ ಪೆಸಿಯೋಲಿಯಲ್ಲಿ 'ಕ್ಯಾಂಪಿಯೊನಾಟೊ ಡೆಲ್ಲಾ ಜುಕೋನ್ ಕುಂಬಳಕಾಯಿ ಉತ್ಸವ'ದ 10ನೇ ಆವೃತ್ತಿಯಲ್ಲಿ ರೈತ ಸ್ಟೆಫಾನೊ ಭೀಮಾಕಾರದ ಫಸಲನ್ನು ಪ್ರದರ್ಶನ ಮಾಡಿದ್ದಾರೆ.
ಕುಂಬಳಕಾಯಿಯನ್ನು ತಕ್ಕಡಿಯಲ್ಲಿ ಹಾಕಿ ತೂಗಿದಾಗ ಬರೋಬ್ಬರಿ 1,226 kg ತೂಗಿದೆ. ಈ ಮೂಲಕ ಕುಂಬಳಕಾಯಿ ವಿಶ್ವದಾಖಲೆಯನ್ನು ಬರೆದಿದೆ.
'ತೂಕ ಮಾಡುವ ಸಮಯದಲ್ಲಿ ನಾನು ಆ ಕಡೆ ನೋಡಲೇ ಇಲ್ಲ. ನನ್ನ ಸ್ನೇಹಿತರು ಮತ್ತು ಪ್ರೇಕ್ಷಕರು ತೂಕವನ್ನು ನೋಡಿದಾಗ ಸಂಭ್ರಮ ಪಟ್ಟರು. ಆ ಕ್ಷಣದಲ್ಲಿ ನಾನು ವಿಶ್ವ ದಾಖಲೆ ನಿರ್ಮಿಸಿದ್ದೇನೆ ಎಂಬುದು ತಿಳಿದು ಬಂತು. ನನ್ನ ಧ್ವನಿಯನ್ನು ಕಳೆದುಕೊಳ್ಳುವವರೆಗೂ ನಾನು ಸಂಭ್ರಮಿಸಿದ್ದೇನೆ' ಎಂದು ಅವರು ಹೇಳಿದ್ದಾರೆ.