
ಬಂಟ್ವಾಳದ 16 ವರ್ಷದ ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣ- ಒಟ್ಟು ನಾಲ್ವರು ಪೊಲೀಸರ ವಶದಲ್ಲಿ
Saturday, October 9, 2021
ಮಂಗಳೂರು: ಬಂಟ್ವಾಳದಲ್ಲಿ 16 ವರ್ಷದ ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿ
ಬಂಟ್ವಾಳ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ..
ಬಂಟ್ವಾಳದಲ್ಲಿ ಶುಕ್ರವಾರ 16 ವರ್ಷ ಪ್ರಾಯದ ಯುವತಿಯನ್ನು ಶಾಲೆಗೆ
ಹೋಗುತ್ತಿದ್ದವೇಳೆ ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು.
ಯುವತಿ ಪರಿಚಿತ ಯುವಕ ಶರತ್ ಶೆಟ್ಟಿ ಎಂಬಾತ ಈ ಕೃತ್ಯ ನಡೆಸಿದ್ದ. ಈತ ಬಿಳಿ ಬಣ್ಣದ ಕಾರಿನಲ್ಲಿ ಐವರೊಂದಿಗೆ
ಈಕೆಯನ್ನು ಅಪಹರಿಸಿ ಅಮ್ಟಾಡಿ ಎಂಬಲ್ಲಿಗೆ ಕೊಂಡೊಯ್ದು ಅತ್ಯಾಚಾರ ಮಾಡಿದ್ದರು.
ಈಕೆಯನ್ನು ಅತ್ಯಾಚಾರ ಮಾಡಿದ ಬಳಿಕ ಬ್ರಹ್ಮರಕೂಟ್ಲುವಿನಲ್ಲಿ ಬಿಟ್ಟು
ಹೋಗಿದ್ದು ಅಸ್ವಸ್ಥಗೊಂಡ ಯುವತಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಾಗಿದ್ದಳ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಂದು ಮಧ್ಯಾಹ್ನ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಸಂಜೆಯ
ವೇಳೆಗೆ ಒಟ್ಟು ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ