
ಬಂಟ್ವಾಳ – 16 ರ ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣ- ಇಬ್ಬರು ಪೊಲೀಸ್ ಬಲೆಗೆ
Saturday, October 9, 2021
ಮಂಗಳೂರು: ಬಂಟ್ವಾಳದಲ್ಲಿ ನಡೆದ 16 ವರ್ಷದ ಬಾಲಕಿಯ ಗ್ಯಾಂಗ್ ರೇಪ್
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳದಲ್ಲಿ ಶಾಲೆಗೆ ಹೋಗುತ್ತಿದ್ದ 16 ವರ್ಷದ ಬಾಲಕಿಯನ್ನು ಶುಕ್ರವಾರ
ಬೆಳಿಗ್ಗೆ ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಬಾಲಕಿ ಶಾಲೆಗೆ ಹೋಗುತ್ತಿದ್ದ ವೇಳೆ ಬಿಳಿ ಕಾರಿನಲ್ಲಿ
ಅಪಹರಿಸಿದ ಐವರ ತಂಡ ಆಕೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ್ದರು.
ಬಾಲಕಿಯ ಪರಿಚಿತ ಯುವಕನೊಬ್ಬ ತನ್ನ ಗ್ಯಾಂಗ್ ಜೊತೆಗೆ ಆಕೆಯನ್ನು ಅಪಹರಿಸಿ
ಅತ್ಯಾಚಾರಗೈದಿದ್ದ. ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದು
ಅಸ್ವಸ್ಥಗೊಂಡ ಬಾಲಕಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು.
ಆಕೆಯ ದೂರಿನಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ
ನಡೆಸುತ್ತಿದ್ದು ಇದೀಗ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.