
45ರ ಪುರುಷ, 25ರ ಯುವತಿಯ ಮದುವೆ ಫೋಟೋ ಭಾರೀ ವೈರಲ್
Wednesday, October 20, 2021
ತುಮಕೂರು: ಇತ್ತೀಚೆಗೆ ಸಣ್ಣ ವಯಸ್ಸಿನ ಯುವತಿಯರು ನಡುಪ್ರಾಯದ ಪುರುಷರನ್ನು ವಿವಾಹವಾಗಿ ಯುವಕರು ಹಲುಬುವಂತೆ ಮಾಡುತ್ತಿರುವ ಸಾಕಷ್ಟು ಪ್ರಕರಣಗಳನ್ನು ನಾವು ಕಾಣುತ್ತಿರುತ್ತೇವೆ. ಇದೀಗ ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು, ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅದರ ಫೋಟೋ ಭಾರಿ ಸದ್ದು ಮಾಡುತ್ತಿದೆ.
ಈ ಫೋಟೋಗಳಿಗೆ ನೆಟ್ಟಿಗರು ಭಾರೀ ಪ್ರಮಾಣದಲ್ಲಿ ಲೈಕ್ ಕಮೆಂಟ್ಸ್ಗಳನ್ನು ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ಜೋಡಿ ಯಾವುದು, ಎಲ್ಲಿಯರು ಏನು ಎತ್ತ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ 45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ ಚಂದುಳ್ಳಿ ಚೆಲುವೆಯೋರ್ವರು ವಿವಾಹವಾಗಿದ್ದಾರೆ. ವಯಸ್ಸಿನ ಅಂತರದ ಮದುವೆಯ ವಿಚಾರ ಹಾಗೂ ಫೋಟೋ ಸಾಕಷ್ಟು ವೈರಲ್ ಆಗುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ. ಶಂಕರ(45) ಮೇಘನಾ (25) ವಿವಾಹವಾಗಿರುವ ಜೋಡಿ.
ಮದುವೆಗೆ ಸರಿಯಾಗಿ ಹುಡುಗಿ ಸಿಗದಿರುವುವುದರಿಂದ ಶಂಕರ್ ಗೆ 45 ವರ್ಷ ವಯಸ್ಸಾದರೂ ಮದುವೆ ಆಗಿರಲಿಲ್ಲ. ಮೇಘನಾಳಿಗೆ ಈ ಮೊದಲೇ ವಿವಾಹವಾಗಿದ್ದು, ವಿಚ್ಛೇದನ ಆಗಿತ್ತು. ಶಂಕರ್ ಮದುವೆಗೆ ಹುಡುಗಿ ಹುಡುಕಿ ಸುಸ್ತಾಗಿ ಮದುವೆಯೇ ಬೇಡ ಎಂದು ನಿರ್ಧರಿಸಿ ತಮ್ಮ ಪಾಡಿಗೆ ಜೀವನ ಮಾಡಿಕೊಂಡಿದ್ದರು. ಈ ವೇಳೆ ಸ್ವತಃ ಮೇಘನಾ ಅವರೇ ಮುಂದೆ ಬಂದು ಶಂಕರ ಅವರನ್ನು ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಒಪ್ಪಿಕೊಂಡ ಶಂಕರ ದೇವಸ್ಥಾನದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇದೀಗ ಇವರ ಮದುವೆಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ.