ಮಂಗಳೂರಿನಲ್ಲಿ ನಡೆದಿತ್ತು 500 ರೂ ವಿಚಾರದಲ್ಲಿ ಕೊಲೆ- ಕೊನೆಗೂ ಆರೋಪಿ ಬಲೆಗೆ!
Friday, October 1, 2021
ಮಂಗಳೂರು: 500 ರೂಪಾಯಿ ವಿಚಾರದಲ್ಲಿ ಫೆಬ್ರವರಿ ಯಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂದರು ರೈಲ್ವೆ ಗೂಡ್ಸ್ ಶೆಡ್ ಯಾರ್ಡ್‌ನಲ್ಲಿ ಅಸ್ಸಾಂನ ಮೈನುಲ್ ಹಕ್ ಬಾರ್ಬುಯ್ಯಾ ಎಂಬಾತನನ್ನು 2021 ಫೆಬ್ರವರಿ ಯಲ್ಲಿ ಕೊಲೆ ಮಾಡಲಾಗಿತ್ತು. ಕೊಲೆ ಮಾಡಿದ್ದ ಒರಿಸ್ಸಾ ಮೂಲದ ಪ್ರದೀಪ್ ಲಕಾರ ತಲೆಮರೆಸಿಕೊಂಡಿದ್ದ.
ಕೊಲೆಯಾದ ಮೈನುಲ್ 10 ವರ್ಷಗಳಿಂದ ಮಂಗಳೂರು ಧಕ್ಕೆ ಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಕುಡಿತದ ಚಟ ಹೊಂದಿದ್ದ ಈತ ಕೊಲೆ ಆರೋಪಿ ಪ್ರದೀಪ್ ಲಕಾರ ಮದ್ಯ ಸೇವನೆ ಮಾಡಿ ಮಲಗಿದ್ದ ವೇಳೆ ಆತನ ಮೊಬೈಲ್ ಪೋನ್ ಕದ್ದು , ವಾಪಸ್ ನೀಡಬೇಕಾದರೆ 500 ರೂ. ನೀಡಬೇಕೆಂದು ಡಿಮ್ಯಾಂಡ್ ಇಟ್ಟಿದ್ದ.
ಇದರಿಂದ ರೋಷಗೊಂಡ ಮೈನುಲ್ ಹಕ್‌ನನ್ನು ಕೊಲೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಮಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ