9ರ ಬಾಲಕಿಯ ಮೇಲೆ 60ರ ವೃದ್ಧನ ಮೇಲೆ ನೀಚ ಕೃತ್ಯ: ಆರೋಪಿ ಅಂದರ್
Thursday, October 14, 2021
ವಿಜಯಪುರ: ಆಟವಾಡಲು ಮನೆಗೆ ಬರುತ್ತಿದ್ದ ಒಂಬತ್ತು ವರ್ಷದ ಬಾಲಕಿ ಮೇಲೆ 60ರ ವಯೋವೃದ್ಧನೋರ್ವ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಆಯುಬ್ ಮೊಮೀನ್ ಎಂಬ ವೃದ್ಧ ಈ ಕೃತ್ಯ ಎಸಗಿರುವ ಆರೋಪಿ.
ವೃದ್ಧನ ನೀಚ ಕೃತ್ಯದ ಪರಿಣಾಮ ಸಂತ್ರಸ್ತ ಬಾಲಕಿಗೆ ತೀವ್ರ ರಕ್ತಸ್ರಾವಾಗಿದ್ದು, ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಗಾಂಧಿಚೌಕ್ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಪರೀತ ರಕ್ತಸ್ರಾವದಿಂದ ಬಳಲುತ್ತಿರುವ ಬಾಲಕಿಯನ್ನು ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಲಕಿಯ ಹೇಳಿಕೆಯನ್ನು ಆಧರಿಸಿ ಆರೋಪಿ ಆಯುಬ್ ಮೊಮೀನ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯ ವಿಚಾರಣೆ ಆರಂಭಿಸಿದ್ದಾರೆ.
ಈ ಬಗ್ಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.