
9 ವರ್ಷದ ಬಾಲಕಿಯ ಅತ್ಯಾಚಾರಿಗೆ 9 ದಿನದಲ್ಲೆ ಶಿಕ್ಷೆ ಪ್ರಕಟ- ಜೈಪುರ ನ್ಯಾಯಾಲಯದಲ್ಲಿ ನಡೆಯಿತು ಶೀಘ್ರ ತೀರ್ಪು
Wednesday, October 6, 2021
ಜೈಪುರ: ಅತ್ಯಾಚಾರಿ ಆರೋಪಿಯೊಬ್ಬನಿಗೆ 9 ದಿನದಲ್ಲಿ ಶಿಕ್ಷೆ ಪ್ರಕಟಿಸುವ ಮಹತ್ವದ ನ್ಯಾಯ ತೀರ್ಪು ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
9 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಜೈಪುರ ನ್ಯಾಯಾಲಯ 9 ದಿನದಲ್ಲಿ ತೀರ್ಪು ನೀಡಿದೆ. ಘಟನೆ ನಡೆದ ಕೇವಲ 9 ದಿನಗಳಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಿರುವುದು ಶ್ಲಾಘನೆಗೆ ಪಾತ್ರವಾಗಿದೆ. 25 ವರ್ಷದ ಕಮಲೇಶ್ ಮೀನಾ ಎಂಬ ಅಪರಾಧಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ, 2 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.
ಸೆಪ್ಟೆಂಬರ್ 26ರಂದು 25 ವರ್ಷದ ಕಮಲೇಶ್ ಮೀನಾ ಎಂಬ ಯುವಕನೋರ್ವ ರಾಜಸ್ತಾನದ ಕೋಟ್ಖವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿದ್ದ.
ಪೊಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸೆ.27 ಆರೋಪಿಯನ್ನು ಬಂಧಿಸಿದ್ದರು.ಕೇವಲ ಹದಿನೆಂಟು ಗಂಟೆಗಳಲ್ಲಿ ಚಾರ್ಜ್‌ಶೀಟ್ ಹಾಕಲಾಗಿತ್ತು.
ನ್ಯಾಯಾಲಯದಲ್ಲಿ ವಿಚಾರಣೆಯನ್ನು 5 ದಿನಗಳಲ್ಲಿ ಮುಗಿಸಿ ಜೈಪುರ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ಪ್ರಕಟಿಸಿದೆ .ಈ ಶೀಘ್ರ ನ್ಯಾಯ ಪ್ರಕ್ರಿಯೆಗೆ ಸುಮಾರು 150 ಪೊಲೀಸ್ ಸಿಬ್ಬಂದಿ ತೊಡಗಿಸಿಕೊಂಡಿದ್ದರು. ರೆ.