ಮದುವೆಯಾಗಿ ಮೂರೇ ತಿಂಗಳಿಗೆ ಪತ್ನಿಯನ್ನು ಮಾರಾಟ ಮಾಡಿ ಯಾರೊಂದಿಗೋ ಓಡಿಹೋದಳೆಂದು ಕಥೆ ಕಟ್ಟಿದ ಕಿರಾತಕ ಪತಿ ಅಂದರ್
Sunday, October 24, 2021
ಬೆಲ್‌ಪಾರಾ/ರಾಜಸ್ಥಾನ: ಆರ್ಥಿಕ ತೊಂದರೆಯಿದೆಯೆಂದು ವಿವಾಹವಾಗಿ ಮೂರೇ ತಿಂಗಳಿಗೆ ಕಿರಾತಕ ಪತಿಯೋರ್ವ ಪತ್ನಿಯನ್ನೇ ಮಾರಾಟ ಮಾಡಿರುವ ವಿಲಕ್ಷಣ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಬೆಲ್‌ಪಾರಾ/ರಾಜಸ್ಥಾನ: ಹಣಕಾಸಿನ ತೊಂದರೆ ಇದೆ ಎಂದು ಮದುವೆಯಾದ ಮೂರು ತಿಂಗಳಿಗೆ ಪತಿಯೊಬ್ಬ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ ಎನ್ನಲಾದ ವಿಲಕ್ಷಣ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಇದೀಗ ಪತ್ನಿಯನ್ನು ರಕ್ಷಿಸಿರುವ ಪೊಲೀಸರು ಪತಿಯನ್ನು ಅರೆಸ್ಟ್ ಮಾಡಿದ್ದಾರೆ.
ಬೆಲ್‌ಪಾರಾ ಪೊಲೀಸ್ ವ್ಯಾಪ್ತಿಯ ಸುಲೇಕೆಲಾ ಗ್ರಾಮದ ಸರೋಜ್ ರಾಣಾ ಎಂಬಾತ ಫೇಸ್‌ಬುಕ್ ಮೂಲಕ ಸೈಂಟಾಲಾ ಪ್ರದೇಶದ ಬೋಲಂಗಿರ್ ಜಿಲ್ಲೆಯ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಇವರ ಸ್ನೇಹ ಬಳಿಕ ಪ್ರೀತಿಯ ಕಡೆಗೆ ತಿರುಗಿದೆ. ಬಳಿಕ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಸಾಂಪ್ರದಾಯಿಕವಾಗಿ ಇಬ್ಬರು ಮದುವೆಯಾಗಿದ್ದಾರೆ.
ಮದುವೆಯಾದ ಮೂರು ತಿಂಗಳ ಬಳಿಕ ಪತಿ ಸರೋಜ್ ರಾಣಾ ತನಗೆ ಆರ್ಥಿಕ ಸಮಸ್ಯೆ ಇದೆ ಎಂದು ಪತ್ನಿಯನ್ನು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ಹೋಗೋಣ ಎಂದು ಒತ್ತಾಯಿಸಿದ್ದ. ಆಕೆ ಒಪ್ಪಿದ ಬಳಿಕ ಇಬ್ಬರೂ ಕೆಲಸಕ್ಕೆಂದು ರಾಯಪುರಕ್ಕೆ ತೆರಳಿದ್ದಾರೆ. ಅಲ್ಲಿಂದ ರಾಜಸ್ಥಾನದ ಹಳ್ಳಿಯೊಂದಕ್ಕೆ ಹೋಗಿದ್ದಾರೆ. ಅಲ್ಲಿ ಸರೋಜ್ ತನ್ನ ಪತ್ನಿಯನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.
ಆ ಬಳಿಕ ಆಕೆಯ ಪೋಷಕರಿಗೆ ಕರೆ ಮಾಡಿರುವ ಆತ ಪತ್ನಿ ಯಾರೊಂದಿಗೋ ಓಡಿ ಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ. ಆದರೆ ಈ ಬಗ್ಗೆ ಅನುಮಾನಗೊಂಡ ಆಕೆಯ ಪೋಷಕರು ಬೆಲ್ಪಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ, ಬೆಲ್ಪಾರಾ ಪೊಲೀಸರು ತನಿಖೆ ನಡೆಸಿದಾಗ, ಪತಿಯೇ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪತಿಯಿಂದ ಮಾರಾಟವಾಗಿದ್ದ ಪತ್ನಿಯನ್ನು ಪೊಲೀಸರು ರಕ್ಷಿಸಿದ್ದು, ಆರೋಪಿ ಸರೋಜ್ ನನ್ನು ಬಂಧಿಸಿದ್ದಾರೆ.