ಬಡವರ ಕಷ್ಟಕ್ಕಾಗುದಲ್ಲದೆ, ದೇಶವೇ ಹೆಮ್ಮೆ ಪಡುವ ಕಾರ್ಯದಲ್ಲಿ ತೊಡಗಿಸುತ್ತೇನೆಂದು ತನಿಖಾಧಿಕಾರಿಯೊಂದಿಗೆ ಆರ್ಯನ್ ಖಾನ್ ಇಂಗಿತ
Sunday, October 17, 2021
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಸದ್ಯ ಬಂಧನಕ್ಕೊಳಗಾಗಿರುವ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ನನ್ನು ತನಿಖಾಧಿಕಾರಿಗಳು ತೀವ್ರವಾಗಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಅದೇ ರೀತಿ ತನಿಖೆಯಿಂದ ಸಿನಿಮಾರಂಗ ಸೇರಿದಂತೆ ಘಟಾನುಘಟಿಗಳ ಡ್ರಗ್ಸ್ ದಂಧೆ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಈ ನಡುವೆ ಆರ್ಯನ್ ಖಾನ್ ತಾನೊಬ್ಬ ದೇಶದ ಉತ್ತಮ ಪ್ರಜೆಯಾಗಬೇಕು ಎಂಬ ಇಚ್ಛೆಯನ್ನು ತನಿಖಾಧಿಕಾರಿಗಳ ಮುಂದಿಟ್ಟಿದ್ದಾನೆಂದು ತಿಳಿದುಬಂದಿದೆ.
ಅದೇ ರೀತಿ ಆತ ತಾನು ಇನ್ನೆಂದೂ ಕೆಟ್ಟ ದಾರಿ ತುಳಿಯಲ್ಲ. ಬಡತದಲ್ಲಿರುವವರ ಕಷ್ಟಕ್ಕೆ ಸಹಾಯ ಮಾಡುತ್ತೇನೆ. ಇಡೀ ದೇಶವೇ ಹೆಮ್ಮೆ ಪಡುವ ಕಾರ್ಯದಲ್ಲಿ ತೊಡಗಿಸುತ್ತೇನೆ. ಬಡವರು, ತುಳಿತಕ್ಕೊಳಗಾದವರ ಏಳಿಗೆಗಾಗಿ ಶ್ರಮಿಸುತ್ತೇನೆ, ಒಳ್ಳೆಯ ಕಾರ್ಯಗಳ ಮೂಲಕ ತನ್ನನ್ನು ಗುರುತಿಸಿಕೊಳ್ಳುತ್ತೇನೆಂದು ಆರ್ಯನ್ ಖಾನ್ ತನಿಖೆಯ ವೇಳೆ ಹೇಳಿದ್ದಾನೆ ಎಂದು ಮುಂಬೈ ವಲಯದ ನಿರ್ದೇಶಕ ಅಮೀರ್ ವಾಂಖೆಂಡೆ ಮುಂದೆ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.
ಅಲ್ಲದೆ ಆರ್ಯನ್ ಖಾನ್ ನೊಂದಿಗೆ ಎನ್‍ಸಿಬಿ ಮತ್ತು ಸಾಮಾಜಿಕ
ಕಾರ್ಯಕರ್ತರು ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭ ಆತ ತಾನೋರ್ವ ಉತ್ತಮ ನಾಗರಿಕನಾಗುವ ಕನಸನ್ನು ಕಾಣುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.