
ಆರ್ಯನ್ ಖಾನ್ ಜೈಲಿನಲ್ಲಿ ಸ್ನಾನವೂ ಮಾಡುತ್ತಿಲ್ಲ, ಶೌಚಕ್ಕೂ ಹೋಗುತ್ತಿಲ್ಲ: ಜೈಲು ಅಧಿಕಾರಿಗಳಿಗೆ ಹೊಸ ತಲೆನೋವು
Friday, October 22, 2021
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲಿರುವ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಗ್ಗೆ ಇದೀಗ ಜೈಲು ಅಧಿಕಾರಿಗಳಿಗೆ ಹೊಸ ತಲೆಬಿಸಿ ಶುರುವಾಗಿದೆ. ದಿನವೂ ಲಕ್ಷಾಂತರ ರೂ. ವೆಚ್ಚ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರ್ಯನ್ ಖಾನ್‌ಗೆ ಜೈಲಿನಲ್ಲಿ ಎಷ್ಟೇ ಸೌಲಭ್ಯ ನೀಡಿದ್ದರೂ ಅದು ಸಹ್ಯವಾಗುತ್ತಿವಂತೆ.
ಐಷಾರಾಮಿ ಶೌಚಾಲಯ, ಬಾತ್ ರೂಂ, ಸ್ವಿಚ್ ಒತ್ತಿದ್ದಲ್ಲಿ ತನ್ನಿಂದ ತಾನೇ ಸ್ನಾನ ಮಾಡಿಸುವ ಯಂತ್ರಗಳ ಸೌಲಭ್ಯಗಳನ್ನು ಹುಟ್ಟಿನಿಂದಲೇ ಬಳಸಿಕೊಂಡು ಬರುತ್ತಿದ್ದ ಸ್ಟಾರ್ ನಟನ ಪುತ್ರನಿಗೆ ಈಗ ಜೈಲಿನ ಸ್ನಾನಗೃಹ ಹಾಗೂ ಶೌಚಾಲಯವನ್ನು ಬಳಸುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ಆತ ಸ್ನಾನವೇ ಮಾಡುತ್ತಿಲ್ಲ, ಮಾತ್ರವಲ್ಲದೇ ಎಲ್ಲರೂ ಬಳಸುವ ಶೌಚಾಲಯವನ್ನು ಬಳಸುತ್ತಿಲ್ಲ. ಈ ಕಾರಣದಿಂದ ಆತ ಆಹಾರ ಸೇವನೆಯನ್ನೇ ತ್ಯಜಿಸಿದ್ದಾನಂತೆ. ನೀರು ಹಾಗೂ ಆಹಾರ ಸೇವನೆ ಮಾಡಿದ್ದಲ್ಲಿ ಶೌಚಕ್ಕೆ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಏನನ್ನೂ ತಿನ್ನುತ್ತಿಲ್ಲ, ಸ್ನಾನವನ್ನೂ ಮಾಡುತ್ತಿಲ್ಲ, ಹೀಗೆ ಆದಲ್ಲಿ ಪರಿಸ್ಥಿತಿ ಬಹಳ ಕಷ್ಟಕರವಾಗಲಿದೆ. ಇದರಿಂದ ಸಮಸ್ಯೆ ತಲೆದೋರಬಹುದು ಎಂದು ಜೈಲಧಿಕಾರಿಗಳು ತಲೆಬಿಸಿಯಲ್ಲಿ ಇದ್ದಾರೆ ಎನ್ನಲಾಗಿದೆ.
ಸದ್ಯ ಮುಂಬೈನ ಆರ್ಥರ್ ರೋಡ್ ನಲ್ಲಿರುವ ಜೈಲು ವಾಸಿಯಾಗಿರುವ ಆರ್ಯನ್ ಖಾನ್ ಗೆ ಜಾಮೀನು ದೊರಕಿಸಬೇಕೆಂದು ಶಾರುಖ್ ಹಾಗೂ ಗೌರಿ ಖಾನ್ ಎಲ್ಲಾ ಕಡೆಗೆ ಓಡಾಟ ನಡೆಸುತ್ತಿದ್ದರೂ ಈವರೆಗೂ ಜಾಮೀನು ಸಿಕ್ಕಿಲ್ಲ. ಆದರೆ ಇತ್ತ ಜೈಲಿಗೆ ಹೊಂದಿಕೊಳ್ಳಲಾಗದೆ ಆರ್ಯನ್ ಒದ್ದಾಡುತ್ತಿರುವುದು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ. ಆತ ಇದೇ ರೀತಿಯಲ್ಲಿ ಸ್ನಾನ, ಅನ್ನಾಹಾರ ಬಿಟ್ಟು ಕೂತರೆ ಆರೋಗ್ಯ ಸಮಸ್ಯೆ ಉಂಟಾಗಲಿದೆ. ಹೀಗಾದರೆ ವಿಚಾರಣೆ ನಡೆಸುವುದು ಕಷ್ಟವಾಗುತ್ತದೆ ಎನ್ನುವುದು ಅವರ ಮಾತು.
ಅದೇ ರೀತಿಯಲ್ಲಿ ಆತ ಇದೇ ರೀತಿ ಮಾಡಿ ಅನಾರೋಗ್ಯ ಪೀಡಿತನಾದಲ್ಲಿ ಕೊನೆಯ ಪಕ್ಷ ಜೈಲಿನಿಂದ ಬಿಡುಗಡೆ ಹೊಂದಿ ಆಸ್ಪತ್ರೆ ಸೇರುವ ಹುನ್ನಾರವೂ ಇದರ ಹಿಂದೆ ಇರಬಹುದು. ಅಲ್ಲಿ ಸಕಲ ಸೌಲಭ್ಯವನ್ನು ಪಡೆಯಲು ಅನುಕೂಲ ಆಗುತ್ತದೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ. ಈ ನಡುವೆಯೇ ಆರ್ಯನ್ ಖಾನ್‌ನನ್ನು ಬೇರೊಂದು ಸೆಲ್ಗೆ ಶಿಫ್ಟ್ ಮಾಡಲಾಗಿದ್ದು, ಆರ್ಯನ್ ಖಾನ್ ತಂದೆ ಶಾರುಖ್ ಖಾನ್ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯವರೆಗೆ ಕೇವಲ ವೀಡಿಯೋ ಕಾಲ್ ಮೂಲಕ ಮಾತನಾಡಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ.