ಗೌರಿ ಖಾನ್ ಬರ್ತ್ ಡೇ, ಅಪ್ಪ-ಅಮ್ಮನ ಮ್ಯಾರೇಜ್ ಆ್ಯನಿವರ್ಸರಿ ಮಿಸ್ ಮಾಡಿಕೊಂಡ ಆರ್ಯನ್ ಖಾನ್: ವಿಷ್ ಮಾಡಲೂ ಅವಕಾಶವಿಲ್ಲ!
Wednesday, October 27, 2021
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಜೈಲುಪಾಲಾಗಿರುವ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಇನ್ನೂ ಜಾಮೀನು ದೊರಕಿಲ್ಲ. ಪರಿಣಾಮ ಈ ವರ್ಷ ತನ್ನ ತಾಯಿ ಗೌರಿ ಖಾನ್ ಬರ್ಡ್ ಡೇ ಮಿಸ್ ಮಾಡಿಕೊಂಡಿದ್ದಾನೆ. ಅ.8ರಂದು ಗೌರಿ ಖಾನ್ ಹುಟ್ಟುಹಬ್ಬ ಇದ್ದು, ಆರ್ಯನ್ ಖಾನ್ ಜೈಲಿನಲ್ಲಿ ಇದ್ದುದರಿಂದ ವಿಷ್ ಮಾಡಲು ಸಾಧ್ಯವಾಗಲಿಲ್ಲ.
ಆದರೆ ಇದೀಗ ಶಾರುಖ್ ಮತ್ತು ಗೌರಿ 30ನೇ ವಿವಾಹ ವಾರ್ಷಿಕೋತ್ಸವ ಅ.25 ರಂದು ಇದ್ದು, ಕೊನೆಯ ಪಕ್ಷ ಇದಕ್ಕಾದರೂ ವಿಷ್ ಮಾಡಲು ವೀಡಿಯೋ ಕಾಲ್ ಮಾಡಲು ಅವಕಾಶ ಕೊಡಬೇಕೆಂದು ಜೈಲು ಅಧಿಕಾರಿಗಳೊಂದಿಗೆ ಆರ್ಯನ್‌ಖಾನ್ ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ಪ್ರತಿವರ್ಷವೂ ಭರ್ಜರಿಯಾಗಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಾ, ಸಕತ್ ಪಾರ್ಟಿ, ಎಂಜಾಯ್ ಮಾಡುತ್ತಿದ್ದ ಶಾರುಖ್ ಪುತ್ರನಿಗೆ ಈ ಬಾರಿ ಎಲ್ಲವೂ ಮಿಸ್ ಆಗಿದೆ. ಆದರೆ ಈ ರೀತಿ ವೀಡಿಯೋ ಕಾಲ್ ಮಾಡಲು, ಮನೆಯವರೊಂದಿಗೆ ಮಾತನಾಡುವ ಅವಕಾಶ ಇಲ್ಲದಿರುವ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಲಿಲ್ಲ ಎನ್ನಲಾಗಿದೆ.
ಆರ್ಯನ್ ಖಾನ್ ಗೆ ಮುಂಬೈನ ವಿಶೇಷ ಎನ್ಡಿಪಿಎಸ್ ನ್ಯಾಯಾಲಯದಲ್ಲಿ ಜಾಮೀನು ನಿರಾಕರಿಸಿದಿರಿಂದ ಅದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ
ಸಲ್ಲಿಸಲಾಗಿದೆ. ಆರ್ಯನ್ ಖಾನ್ ಪರವಾಗಿ ಮಾಜಿ ಅಟಾರ್ನಿ ಜನರಲ್ ಆಗಿರುವ ಮುಖುಲ್ ರೋಹಟಗಿ ಅವರು ವಾದ ಮಂಡಿಸಲಿದ್ದಾರೆ.