Astrology - ದಿನ ಭವಿಷ್ಯ- ಇಂದು ನಿಮ್ಮ ಗ್ರಹಬಲ ಹೇಗಿದೆ...? ಕಾಲಜ್ಞಾನಿ ಖ್ಯಾತ ಜ್ಯೋತಿಷಿ ಶ್ರೀ ಶ್ರೀ ಶ್ರೀ ಆಚಾರ್ಯ ರವೀಂದ್ರ - 16/10/2021
16-10-2021
ಶನಿವಾರ
ಕನ್ಯಾ ಮಾಸ
ಸರ್ವೈಕಾದಶಿ
ಶರದೃತು (ಋತು)
ಧನಿಷ್ಠೆ(ನಿತ್ಯ ನಕ್ಷತ್ರ)
ಮೇಷ
ಪಾಲುದಾರಿಕಾ ವ್ಯವಹಾರದಲ್ಲಿ ಸಮಾಧಾನ, ತಾಳ್ಮೆಯಿಂದ ಶ್ರೇಯಸ್ಸು. ನಿರೀಕ್ಷಿತ ಧನಾರ್ಜನೆ, ಸಹೋದರರಿಂದ ಸುಖ, ಪಾನೀಯ ಆಹಾರೋದ್ಯಮ ಸಂಸ್ಥೆಗಳಿಗೆ ಅನುಕೂಲ, ಸಾಂಸಾರಿಕ ನೆಮ್ಮದಿಗೆ ತಾಳ್ಮೆ ಅಗತ್ಯ.
ವೃಷಭ
ಆರೋಗ್ಯದ ಬಗ್ಗೆ ಸೂಕ್ತ ಕಾಳಜಿಯಿಂದ ವೃದ್ಧಿ, ರಾಜಕೀಯ ನಾಯಕರಿಗೆ ಆಹಾರೋದ್ಯಮ, ವಸ್ತ್ರ, ಆಭರಣ ವ್ಯವಹಾರಸ್ತರಿಗೆ ಅಭಿವೃದ್ಧಿ. ನಿರೀಕ್ಷಿತ ಧನವೃದ್ಧಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸಹಾಯ. ದಾಂಪತ್ಯ ಸುಖ ವೃದ್ಧಿ
ಮಿಥುನ
ಕಾರ್ಯನಿಮಿತ್ತ ದೀರ್ಘ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ವೃದ್ಧಿ, ದೇಹಕ್ಕೆ ಶ್ರಮವಾದರೂ ಸಾಧಿಸಿದ ಸಂತೋಷ, ಗೃಹೋಪಕರಣ ವಸ್ತುಗಳಿಗೆ, ಧಾರ್ಮಿಕ ಕಾರ್ಯಗಳಿಗೆದಾನ ಧರ್ಮಾಧಿಗಳಿಗೆ ಧನ ವ್ಯಯಿಸಿದ ತೃಪ್ತಿ. ಸ್ನೇಹಿತರ ಸಾಂಗತ್ಯದಿಂದ ಸಂತೋಷ.
ಕರ್ಕ (ಕರ್ಕಾಟಕ)
ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ನಿರ್ಣಾಯಕ ನಿರ್ಧಾರದಿಂದ ಯಶಸ್ಸು. ನಾಯಕತ್ವ ಗುಣ ವೃದ್ಧಿ. ಅಧಿಕ ಧನಾರ್ಜನೆ. ಅನಿರೀಕ್ಷಿತ ಲಾಭ.
ಸಿಂಹ
ಬಂಧುಮಿತ್ರರ ಸಹಕಾರ. ತಾಳ್ಮೆ ವಹಿಸಿ. ಮನೆಯಲ್ಲಿ ಸಂತಸದ ವಾತಾವರಣ. ದೂರದ ಮಿತ್ರರ ಸಮಾಗಮ. ಪಾಲುದಾರಿಕಾ ವ್ಯವಹಾರದಲ್ಲಿ ಹೆಚ್ಚಿದ ಅಭಿವೃದ್ಧಿ. ಯೋಚಿಸಿದಂತೆ ಕಾರ್ಯ ಸಫಲತೆಯಿಂದ ಮನ ಸಂತೋಷ.
ಕನ್ಯಾ
ವಿದ್ಯಾರ್ಥಿಗಳಿಗೆ, ರಾಜಕೀಯ ನಾಯಕರಿಗೆ, ಧಾರ್ಮಿಕ ನಾಯಕರಿಗೆ ಶುಭ ಫಲ. ದೀರ್ಘ ಪ್ರಯಾಣದಿಂದ ಲಾಭ, ನೂತನ ಬಂಧುಮಿತ್ರರ ಭೇಟಿ, ಸುಖ ಸಂತೋಷದಿಂದ ಕೂಡಿದ ದಿನ. ಆರ್ಥಿಕ ವಿಚಾರದಲ್ಲಿ ಸ್ತ್ರೀ ಸಹಾಯ
ತುಲಾ
ಅರೋಗ್ಯದ ಕಡೆ ಗಮನಕೊಡಿ. ದಂಪತಿಗಳಲ್ಲಿ ಪರಸ್ಪರ ಸಹಕಾರ ಅಗತ್ಯ. ಧನಾರ್ಜನೆಗೆ ಕೊರತೆ ಉಂಟಾಗುತ್ತದೆ. ಮಾತಿನಲ್ಲಿ ಸ್ಪಷ್ಟತೆ, ತಾಳ್ಮೆ ವಹಿಸಿದರೆ ಯಶಸ್ಸು. ಮಾನಸಿಕ ಒತ್ತಡ ಒಳಗಾಗುವ ಸನ್ನಿವೇಶ ಬರುತ್ತದೆ. ಏಕಾಗ್ರತೆ, ದೈವ ಚಿಂತನೆಯಿಂದ ನೆಮ್ಮದಿ.
ವೃಶ್ಚಿಕ
ಮಿತ್ರರಲ್ಲಿ,ಪಾಲುದಾರರಲ್ಲಿ ಸಂಸಾರಿಕ ವಿಚಾರದಲ್ಲಿ ಘರ್ಷಣೆಗೆ ಅವಕಾಶ ನೀಡದೆ ಕಾರ್ಯ ಸಾಧಿಸಿಕೊಳ್ಳಿ. ದೂರ ಪ್ರಯಾಣದ ಕಾರ್ಯಗಳ ಸಫಲತೆ, ಉತ್ತಮ ಧನಾರ್ಜನೆ, ಚಿತ್ತ ಚಾಂಚಲ್ಯ ಇರುವವರಿಗೆ ಕೆಟ್ಟ ದಿನ. ಆರೋಗ್ಯ ವೃದ್ಧಿ
ಧನು
ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ. ಉತ್ತಮ ವಾಕ್‌ಶಕ್ತಿಯಿಂದ ನಿರೀಕ್ಷಿತ ಧನಾಗಮ, ಭೂಮಿ ವಾಹನಾದಿ ಸುಖ, ಸ್ವಂತ ಪರಿಶ್ರಮದಿಂದ ಗುರಿ ಸಾಧಿಸಿದ ತೃಪ್ತಿ. ಗುರು ಹಿರಿಯರ ಆರೋಗ್ಯ ಜಾಗೃತೆ ವಹಿಸಿ. ಮನಸ್ತಾಪ, ಕಲಹದಿಂದ ದೂರವಿರಿ
ಮಕರ
ಉತ್ತಮ ಆರೋಗ್ಯ, ಬಂಧುಮಿತ್ರರ ಭೇಟಿ. ಮನೆಯಲ್ಲಿ ಕೊಂಚ ನೆಮ್ಮದಿ. ಉದ್ಯೋಗ ವ್ಯವಹಾರದಲ್ಲಿ ಯಶಸ್ಸು. ದಾಂಪತ್ಯ ತೃಪ್ತಿದಾಯಕ. ಮಕ್ಕಳಿಂದ ಅನುರಾಗ ವೃದ್ಧಿ. ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ
ಕುಂಭ
ಸಂಸಾರದೊಂದಿಗೆ ದೀರ್ಘ ಪ್ರಯಾಣ ಸಾಧ್ಯತೆ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಉದ್ಯೋಗ-ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಧನ ಸಮೃದ್ಧಿ. ಯಶಸ್ಸು. ಸುಖ ಸಂತೋಷ. ಉತ್ತಮ ವಾಕ್ ಚಾತುರ್ಯದಿಂದ ಆಪ್ತರೊಂದಿಗೆ ಸಂತೋಷ
ಮೀನ
ಧೈರ್ಯ ಕಾರ್ಯದಿಂದ ಕೂಡಿದ ಕಾರ್ಯವೈಖರಿ. ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ. ನಿರೀಕ್ಷಿತ ಗೌರವಾನ್ವಿತ ಧನ ಸಂಪತ್ತು ವೃದ್ಧಿ. ಧಾರ್ಮಿಕ ಕ್ಷೇತ್ರ ಸಂದರ್ಶನದಿಂದ ಮನೋಲ್ಲಾಸ. ದೂರದ ಮಿತ್ರರ, ಗುರು ಹಿರಿಯರ ಸಹಕಾರ.