
ಬಕೇಟ್ ನೀರಿಗೆ ಬಿದ್ದು ಮೃತಪಟ್ಟ ಒಂದುವರೆ ವರ್ಷದ ಮಗು
Wednesday, October 27, 2021
ಬೆಳಗಾವಿ: ಒಂದೂವರೆ ವರ್ಷದ ಮಗುವೊಂದು ಬಕೆಟ್ ನೀರಿಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ತಾಂವಶಿ ಗ್ರಾಮದ ಸನದಿ ತೋಟದ ಮನೆಯಲ್ಲಿ ವಾಸವಿದ್ದ ನಿಂಗಪ್ಪ ಮಸರಗುಪ್ಪಿ ಎಂಬುವರ ಗಂಡು ಮಗು ಬಕೇಟ್ ನೀರಿಗೆ ಬಿದ್ದು ಮೃತಪಟ್ಟ ಮಗು. ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಅಲ್ಲಿಯೇ ಪಾತ್ರೆ ತೊಳೆಯಲೆಂದು ನೀರು ತುಂಬಿದ್ದ ಬಕೆಟ್ನಲ್ಲಿ ಬಿದ್ದಿದೆ. ಮಗುವಿನ ತಂದೆ ಹೊಲಕ್ಕೆ ಕೆಲಸಕ್ಕೆ ಹೋಗಿದ್ದು, ತಾಯಿ ಅಡುಗೆ ಮನೆ ಕೆಲಸ ಮಾಡುತ್ತಿದ್ದರು.
ಸ್ವಲ್ಪ ಹೊತ್ತು ಕಳೆದ ಬಳಿಕ ಮಗು ಎಲ್ಲಿಯೂ ಕಾಣಿಸದಿದ್ದಾಗ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನೀರಿನ ಬಕೆಟ್ನೊಳಗೆ ಬಿದ್ದು ಮಗು ಮೃತಪಟ್ಟಿರುವುದು ಪತ್ತೆಯಾಗಿದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.