
ಉಪ್ಪಿನಂಗಡಿ: ಬಸ್ ಹರಿದು ತಾಯಿ - ಮಗು ಸ್ಥಳದಲ್ಲಿಯೇ ಮೃತ್ಯು
Tuesday, October 12, 2021
ಮಂಗಳೂರು:ಚಾಲಕನ ಅತೀ ವೇಗದ ಚಾಲನೆಯಿಂದ ಕೆಎಸ್ಆರ್ ಟಿಸಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ತಾಯಿ-ಮಗು ಸ್ಥಳದಲ್ಲಿಯೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಸಿದ್ದಿಕ್ ಎಂಬವರ ಪತ್ನಿ ಶಾಹಿದಾ(25) ಹಾಗೂ ಒಂದು ವರ್ಷದ ಮಗು ಶಾಹಿಲ್ ಮೃತಪಟ್ಟ ದುರ್ದೈವಿಗಳು.
ಗೇರುಕಟ್ಟೆಯಲ್ಲಿರುವ ತಾಯಿ ಮನೆಗೆ ಬಂದಿದ್ದ ಶಾಹಿದಾ ಮಗುವಿಗೆ ಅನಾರೋಗ್ಯದ ನಿಮಿತ್ತ ಪುತ್ತೂರಿಗೆ ವೈದ್ಯರಲ್ಲಿಗೆ ಹೋಗುತ್ತಿದ್ದರು. ಬಸ್ ನಿಲ್ದಾಣಕ್ಕೆ ಬಂದ ಅವರು ಬಸ್ ನಿಲ್ದಾಣಕ್ಕೆ ತಿರುಗುವಲ್ಲೇ ಇರುವ ನಂದಿನಿ ಮಿಲ್ಕ್ ಪಾರ್ಲರ್ ಎದುರಿನಿಂದ ಮತ್ತೊಂದು ಕಡೆಗೆ ಕ್ರಾಸ್ ಮಾಡುತ್ತಿದ್ದರು. ಆಗ ಬಸ್ ನಿಲ್ದಾಣದೊಳಗೆ ಅತಿ ವೇಗದಿಂದ ಬಂದ ಕೆಎಸ್ಆರ್ ಟಿಸಿ ಬಸ್ ತಾಯಿ-ಮಗುವಿಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ಅಲ್ಲೇ ಬಿದ್ದ ಶಾಹಿದಾ - ಶಾಹಿಲ್ ತಲೆಯ ಮೇಲೆಯೇ ಬಸ್ ಹರಿದಿದೆ. ಪರಿಣಾಮ ತಾಯಿ ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.