ಮಂಗಳೂರಿನ ಬಾಂಬೆ ಲಕ್ಕಿ ಹೋಟೆಲ್ ಮಾಲಕ ನಿಧನ
Monday, October 18, 2021
ಮಂಗಳೂರು: ಮಂಗಳೂರಿನಲ್ಲಿ ಖ್ಯಾತಿ ಪಡೆದಿರುವ ಬಾಂಬೆ ಲಕ್ಕಿ ಹೋಟೆಲ್ ಮಾಲಕ ಹಾಜಿ ಎಂ. ಸುಲೈಮಾನ್ ಇಂದು ನಿಧನರಾಗಿದ್ದಾರೆ.
ನಗರದ ಬಂದರ್ ನಲ್ಲಿರುವ
ಬಾಂಬೆ ಲಕ್ಕಿ ಹೋಟೆಲ್ ಕರಾವಳಿಯಲ್ಲಿ ಖ್ಯಾತಿವೆತ್ತ ಹೋಟೆಲ್ ಆಗಿದೆ.
ಹಾಜಿ ಎಂ. ಸುಲೈಮಾನ್ ( 84 ) ಪತ್ನಿ, 5 ಪುತ್ರರು ಮತ್ತು ಎರಡು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೂಲತಃ ಕುದ್ರೋಳಿಯವರಾದ ಹಾಜಿ
ಸುಲೈಮಾನ್ ಅವರು ನಗರದ ಪಾಂಡೇಶ್ವರದಲ್ಲಿ ನೆಲೆಸಿದ್ದರು. ಕುದ್ರೋಳಿ ಜಾಮಿಯಾ ಮಸೀದಿಯ ಟ್ರಸ್ಟಿಯಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು
ಹಾಜಿ ಸುಲೈಮಾನ್ ಅವರು, ಕೊಡುಗೈ ದಾನಿಯೆಂದು ಗುರುತಿಸಿಕೊಂಡಿದ್ದರು.