ಹೊಸ ಬಟ್ಟೆ ಧರಿಸಿಕೊಂಡು ಪುತ್ತೂರಿನಲ್ಲಿ ಕೃಷಿಕ ದಂಪತಿ ಆತ್ಮಹತ್ಯೆ- ಕಾರಣ ?
Monday, October 18, 2021
ಮಂಗಳೂರು: ಕೃಷಿಕ ದಂಪತಿಗಳು ಹೊಸ ಬಟ್ಟೆ ಧರಿಸಿಕೊಂಡು ಆತ್ಮಹತ್ಯೆ
ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಾದೆಕರ್ಯದಲ್ಲಿ ಘಟನೆ ನಡೆದಿದೆ.
ಪಾದೆಕರ್ಯದ ನಿವಾಸಿಗಳಾದ ಕೃಷಿಕ ಸುಬ್ರಹ್ಮಣ್ಯ ಭಟ್ (65) ಮತ್ತು ಶಾರಾದ (50) ಆತ್ಮಹತ್ಯೆ ಮಾಡಿಕೊಂಡ
ದಂಪತಿಗಳು.
ಇವರಿಬ್ಬರು ರಾತ್ರಿ ತಮ್ಮ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಮಕ್ಕಳು ಬಾಗಿಲು
ತೆಗೆದು ನೋಡಿದಾಗ ಇಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇವರು ಹೊಸ ಬಟ್ಟೆ ಧರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು
ಹೇಳಲಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ
ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.