ಹೆಂಡತಿಗೆ ಬೆಂಗಳೂರು ಮೋಹ- ಊರಿನಲ್ಲಿ ಮೂಲೆಗುಂಪಾಗುತ್ತಿದ್ದ ಬೇಸರದಲ್ಲಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ!
ರಾಮನಗರ:
ಹೆಂಡತಿ ಬೆಂಗಳೂರು ನಗರದಲ್ಲಿ ನೆಲೆಸಲು
ಪೀಡಿಸುತ್ತಿದ್ದದ್ದು ಮತ್ತು ಊರಿನಲ್ಲಿ ಮೂಲೆಗುಂಪಾಗುತ್ತಿದ್ದ ಬೇಸರದಲ್ಲಿ ಪತ್ಮಿಯನ್ನು ಕೊಂದು ತಾನು
ಆತ್,ಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ
ಹೋಬಳಿ, ಗುಡ್ಡೆ ವೀರನಹೊಸಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ದೇಸೀಗೌಡ
(35) ಎಂಬಾತ ಪತ್ನಿ ಇಂದಿರಮ್ಮ (31) ಸಾವಿಗೀಡಾದವರು. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ
ಇವರು ಕೊರೊನಾ ಹಾವಳಿ ಬಳಿಕ ಊರಿಗೆ ಬಂದು ಜೀವನ ನಡೆಸುತ್ತಿದ್ದರು. ಇವರಿಗೆ ಹದಿನೆಂಟು ವರ್ಷಗಳ ಹಿಂದೆ
ಮದುವೆಯಾಗಿದ್ದು ಓರ್ವ ಪುತ್ರ ನಿದ್ದಾನೆ.
ಕೊರೊನಾ ಮುಗಿದ
ಬಳಿಕ ಇಂದಿರಮ್ಮ ಗೆ ಮತ್ತೆ ಬೆಂಗಳೂರಿಗೆ ವಾಪಾಸು
ಹೋಗಲು ಆಶೆ ಹುಟ್ಟಿದ್ದು ಗಂಡನಲ್ಲಿ ಬೆಂಗಳೂರಿಗೆ ಮತ್ತೆ ವಾಪಾಸು ಕರೆದುಕೊಂಡು ಹೋಗುವಂತೆ ಹೇಳುತ್ತಿದ್ದರು.
ಜೊತೆಗೆ ಊರಿಗೆ ಬಂದು ಕೋಳಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ದೇಸಿಗೌಡರ ವ್ಯವಹಾರವನ್ನು
ತಾನೇ ವಹಿಸಿಕೊಂಡಿದ್ದರು. ಇದರಿಂದ ಮೂಲೆಗುಂಪಾಗುವ ಆತಂಕ ಇವರಿಗೆ ವ್ಯಕ್ತವಾಗಿತ್ತು. ಇದರ ನಡುವೆ
ಕಳೆದ ಮೂರು ದಿನಗಳ ಹಿಮದೆ ಬೆಂಗಳೂರಿಗೆ ವಾಪಾಸು ಹೋಗುವಂತೆ ಇಂದಿರಮ್ಮ ಜಗಳ ಮಾಡಿಕೊಂಡಿದ್ದರು . ಇದರಿಂದ
ನೊಂದ ದೇಸಿಗೌಡ ,ಪತ್ನಿಯನ್ನು
ಕೊಲೆ
ಮಾಡಿ, ತಾನೂ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ.