ಸಿ.ಪಿ.ಯೋಗೀಶ್ವರ್ ಪುತ್ರಿಯ ವಿರುದ್ಧ ಬಾಡಿಗೆ, ಕಂದಾಯ ವಂಚನೆ ಆರೋಪ: ಕಾನೂನು ಹೋರಾಟಕ್ಕೆ ಟಿಎಪಿಸಿಎಂಎಸ್ ಆಡಳಿತ ಮಂಡಳಿ ನಿರ್ಧಾರ
Saturday, October 2, 2021
ಮಂಡ್ಯ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ವಿರುದ್ಧ ಬಾಡಿಗೆ ಮತ್ತು ಕಂದಾಯ ಪಾವತಿಸದ ಹಿನ್ನೆಲೆಯಲ್ಲಿ ಮದ್ದೂರು ಟಿಎಪಿಸಿಎಂಎಸ್ ಆಡಳಿತ ಮಂಡಳಿ ಕಾನೂನು ಹೋರಾಟಕ್ಕೆ ನಿರ್ಧಾರಿಸಿದೆ.
ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ನ ಮಾಲೀಕರಾಗಿರುವ ನಿಶಾ ಯೋಗೇಶ್ವರ್ ಅವರು 2017ರಲ್ಲಿ ಮದ್ದೂರು ಟಿಎಪಿಸಿಎಂಎಸ್ ಗೆ ಸೇರಿರುವ ಗೋದಾಮ್ ಅನ್ನು ಬಾಡಿಗೆಗೆ ಪಡೆದಿದರು. ಆದರೆ, ಮಾಡಿಕೊಂಡ ಒಪ್ಪಂದದಂತೆ ಬಾಡಿಗೆ ಹಾಗೂ ಕಂದಾಯವನ್ನು ನಿಶಾ ಅವರ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಕಂಪೆನಿ ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
2018 ಎಪ್ರಿಲ್ ನಿಂದಲೂ ನಿಶಾ ಅವರ ಕಂಪೆನಿಯು ಬಾಡಿಗೆ ಹಾಗೂ ಕಂದಾಯವನ್ನು ಬಾಕಿ ಉಳಿಸಿಕೊಂಡಿದೆ. ಗೋದಾಮು ಬಾಡಿಗೆ 42.47 ಲಕ್ಷ ರೂ., ಖಾಲಿ ಜಾಗದ ನೆಲ ಬಾಡಿಗೆ 1.09 ಲಕ್ಷ ರೂ. ಹಾಗೂ ಪುರಸಭೆಯ ಕಂದಾಯ ಬಾಕಿ 4.78 ಲಕ್ಷ ರೂ.ವನ್ನು ಬಾಕಿ ಉಳಿಸಿಕೊಂಡಿದೆ. ಇದೀಗ ನಿಶಾ ಅವರ ಕಂಪೆನಿ ವಿರುದ್ಧ ಮದ್ದೂರು ಟಿಎಪಿಸಿಎಂಎಸ್ ಆಡಳಿತ ಮಂಡಳಿ ಕಾನೂನು ಕ್ರಮಕ್ಕೆ ನಿರ್ಧಾರ ಮಾಡಿದೆ.