ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ!
Monday, October 25, 2021
ಕಾರವಾರ: ನದಿಗೆ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಬಾಲಕನನ್ನು ಮೊಸಳೆಯೊಂದು ಎಳೆದೊಯ್ದ ಘಟನೆ ದಾಂಡೇಲಿಯಲ್ಲಿ ಭಾನುವಾರ ನಡೆದಿದೆ.
ಸ್ಥಳೀಯ ನಿವಾಸಿ ಮೋಹಿನ್ ಮೆಹಬೂಬ್ ಗುಲ್ಬರ್ಗಾವಾಲೆ(16) ಮೊಸಳೆ ಎಳೆದೊಯ್ದ ಬಾಲಕ.
ಬಾಲಕ ಮೋಹಿನ್ ಮೆಹಬೂಬ್ ಹಳಿಯಾಳ ರಸ್ತೆಯಲ್ಲಿರುವ ಕಾಳಿ ನದಿಯಲ್ಲಿ ಮೀನು ಹಿಡಿಯಲೆಂದು ಗಾಳ ಹಾಕಿ ಕುಳಿತ್ತಿದ್ದ. ಆಗ ಮೊಸಳೆಯೊಂದು ಹಠಾತ್ ದಾಳಿ ನಡೆಸಿ ಆತನನ್ನು ಕಚ್ಚಿ ನೀರಿಗೆ ಎಳೆದೊಯ್ದಿದೆ.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ, ಪೊಲೀಸ್ ಹಾಗೂ ರಿವರ್ ರ್ಯಾಫ್ಟಿಂಗ್ ತಂಡದ ಸದಸ್ಯರು ಆತನಿಗಾಗಿ ಹುಡುಕಾಟ ನಡೆಸುದ್ದಾರೆ. ಅಲ್ಲದೆ ಸೂಪಾ ಅಣೆಕಟ್ಟೆಯಿಂದ ನೀರು ಹೊರ ಬಿಟ್ಟರೆ ಹುಡುಕಾಟಕ್ಕೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ನೀರು ಬಿಡದಂತೆ ಕೆಪಿಸಿಗೆ ವಿನಂತಿಸಲಾಗಿದೆ.