-->
Dasara Huli Kunitha- ಕಾಂಗ್ರೆಸ್‌ನಿಂದ ದಸರಾ ಸಂಭ್ರಮ: ಹುಲಿ ಕುಣಿತ ಯಶಸ್ವಿ

Dasara Huli Kunitha- ಕಾಂಗ್ರೆಸ್‌ನಿಂದ ದಸರಾ ಸಂಭ್ರಮ: ಹುಲಿ ಕುಣಿತ ಯಶಸ್ವಿ

ಕಾಂಗ್ರೆಸ್‌ನಿಂದ ದಸರಾ ಸಂಭ್ರಮ: ಹುಲಿ ಕುಣಿತ ಯಶಸ್ವಿ






ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷ ಕುಣಿತ ನಡೆಯಿತು.



ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಮುಂದೆ ನಡೆದ ಹುಲಿ ವೇಶ ಕುಣಿತದಲ್ಲಿ ಜಿಲ್ಲೆಯ ಪ್ರಖ್ಯಾತ ಹುಲಿ ಕುಣಿತ ತಂಡ ಮಂಗಳೂರು ಫ್ರೆಂಡ್ಸ್ ಟೈಗರ್ಸ್ ಭಾಗವಹಿಸಿತು.



ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮಾನಂದ ಪೂಜಾರಿ ಮತ್ತು ಉಪಾಧ್ಯಕ್ಷ ಎಸ್.ಕೆ. ಸವಾನ್ ಈ ಹುಲಿ ಕುಣಿತದ ಆಯೋಜಿಸುವಲ್ಲಿ ನೇತೃತ್ವ ವಹಿಸಿದ್ದರು.



ಮಾಜಿ ಶಾಸಕ ಜೆ.ಆರ್. ಲೋಬೋ, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.



ಮಾಜಿ ಉಪ ಮೇಯರ್ ಮಹಮ್ಮದ್ ಕುಂಜತ್ತಬೈಲ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಟಿ.ಕೆ. ಸುಧೀರ್, ನೀರಜ್ ಪಾಲ್ ಸಹಿತ ಹಲವು ನಾಯಕರು ಹುಲಿ ಕುಣಿತ ಸಂಘಟಿಸುವಲ್ಲಿ ಶ್ರಮಿಸಿದ್ದರು.


Ads on article

Advertise in articles 1

advertising articles 2

Advertise under the article