ಲೈಂಗಿಕವಾಗಿ ಸೆಳೆಯುವ ಡೇಟಿಂಗ್ ಆ್ಯಪ್ ಪ್ರೊಫೈಲ್ ನಲ್ಲಿ ಬಾಹುಬಲಿ ನಟಿಯ ಫೋಟೋ: ಸೈಬರ್ ಠಾಣೆ ಮೆಟ್ಟಿಲೇರಿದ ಆಶ್ರಿತಾ ವೇಮುಗಂತಿ
Tuesday, October 26, 2021
ಹೈದರಾಬಾದ್: ಯುವ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಲ ವ್ಯಯ ಮಾಡುತ್ತಲೇ ಇರುತ್ತಾರೆ. ಆದ್ದರಿಂದ ವಿವಿಧ ಆ್ಯಪ್ ಗಳು ಸಕ್ರಿಯವಾಗುತ್ತಲೇ ಇರುತ್ತದೆ. ಅದರಲ್ಲೂ ಡೇಟಿಂಗ್ ಆ್ಯಪ್ಗಳ ಭರಾಟೆಯಂತೂ ಸಾಕಷ್ಟು ಜೋರಾಗಿದೆ. ಬಹುತೇಕ ಡೇಟಿಂಗ್ ಆ್ಯಪ್ಗಳಲ್ಲೂ ನಕಲಿ ಪ್ರೊಫೈಲ್ಗಳೇ ಇರುತ್ತವೆ. ಅದರಲ್ಲೂ ಜಾಲತಾಣಿಗರನ್ನು ಆಕರ್ಷಿಸಲು ನಟಿಯರ ಭಾವಚಿತ್ರಗಳನ್ನು ಬಳಸಲಾಗುತ್ತದೆ.
ಆಘಾತಕಾರಿ ವಿಚಾರವೆಂದರೆ ಲೈಂಗಿಕವಾಗಿ ಸೆಳೆಯುವ ಹಲವು ಡೇಟಿಂಗ್ ಅಪ್ಲಿಕೇಶನ್‌ಗಳು ಅಪಾಯಕಾರಿ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿವೆ. ಇತ್ತೀಚೆಗೆ ಇಂತಹದೇ ಒಂದು ಆ್ಯಪ್ನಲ್ಲಿ ಬಾಹುಬಲಿ ಸಿನಿಮಾ ನಟಿಯ ಚಿತ್ರಗಳು ಅಪ್ಲೋಡ್ ಆಗಿವೆ. ಇದಕ್ಕೆ ನಟಿ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.
ಬಾಹುಬಲಿ ಎರಡನೇ ಭಾಗದಲ್ಲಿ ನಟಿ ಅನುಷ್ಕಾ ಅತ್ತಿಗೆ ಪಾತ್ರ ಮಾಡಿರುವ ಆಶ್ರಿತಾ ವೇಮುಗಂತಿ ಯವರ ಫೋಟೋಗಳೇ ಇಂತಹ ಡೇಟಿಂಗ್ ಆ್ಯಪ್ ಗಳಲ್ಲಿ ಅಪ್ಲೋಡ್ ಆಗಿದ್ದು. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಶೇಡಿ ಡೇಟಿಂಗ್ ಅಪ್ಲಿಕೇಶನ್‌ನ ಜಾಹೀರಾತು ಕಾಣಿಸಿಕೊಂಡಿದೆ. ಆದರೆ ಈ ಆ್ಯಪ್ನಲ್ಲಿ ಆಶ್ರಿತಾ ವೇಮುಗಂತಿಯವರ ಫೋಟೋಗಳನ್ನು ಪ್ರೊಫೈಲ್ ಚಿತ್ರವಾಗಿ ಇರಿಸಲಾಗಿದೆ.
ಇಂತಹ ಹಲವು ಪೋಸ್ಟ್‌ಗಳಿಂದ ಆಘಾತಕ್ಕೊಳಗಾದ ಆಶ್ರಿತಾ, ಇದೀಗ ಆ ಡೇಟಿಂಗ್ ಆಪ್‌ಗಳ ಮೇಲೆ ಕಾನೂನು ಸಮರ ಸಾರಿದ್ದಾರೆ. ಅದಕ್ಕಾಗಿ ಅವರು ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.