ಕಿವಿ ನೋವೆಂದು ಇಎನ್ ಟಿ ವೈದ್ಯರಲ್ಲಿಗೆ ಬಂದ ಮಹಿಳೆಯ ಕಿವಿ ನೋಡಿ ವೈದ್ಯರಿಗೇ ಶಾಕ್
Sunday, October 24, 2021
ಝೂಝೂ (ಚೀನಾ): ಕಿವಿನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಕಿವಿಯನ್ನು ಸ್ಕ್ಯಾನಿಂಗ್ ಮಾಡಿ ತಪಾಸಣೆ ನಡೆಸಿದಾಗ ಜೀವಂತ ಜೇಡರ ಹುಳುವನ್ನು ಕಂಡು ವೈದ್ಯರೇ ಕಂಗಾಲಾಗಿರುವ ಘಟನೆ ಚೀನಾದ ದಕ್ಷಿಣದಲ್ಲಿರುವ ಹುನಾನ್ ಪ್ರಾಂತ್ಯದ ಝೂಝೂ ಎಂಬಲ್ಲಿ ಸಂಭವಿಸಿದೆ.
ಯೀ ಎಂಬ ಮಹಿಳೆಯು ಕಿವಿನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ದಿನ ಆಕೆ ಕಿವಿ ನೋವಿನಿಂದ ತೀವ್ರ ಹಿಂಸೆ ಅನುಭವಿಸಿದ್ದರು. ಅವರ ಕಿವಿಯೊಳಗೆ ವಿಪರೀತ ಸೆಳೆತ ಕಂಡು ಸಹಿಸಲಸಾಧ್ಯವೆಂದು ವೈದ್ಯರ ಬಳಿ ಬಂದಿದ್ದರು. ಆಕೆ "ತಮ್ಮ ಕಿವಿಯೊಳಗೆ ಏನೋ ಇದ್ದಂತೆ ಭಾಸವಾಗುತ್ತಿದೆ. ಕಿವಿಯೂ ಸರಿಯಾಗಿ ಕೇಳುತ್ತಿಲ್ಲ" ಎಂದು ವೈದ್ಯರಲ್ಲಿ ಹೇಳಿದ್ದರು.
ವೈದ್ಯರು ಆಕೆಯ ಕಿವಿಯನ್ನು ಸ್ಕ್ಯಾನಿಂಗ್ ಮಾಡಿದಾಗ ಅಲ್ಲಿ ಕ್ರಿಮಿಯೊಂದು ಕಂಡುಬಂದಿದೆ. ಬಳಿಕ ಪರಿಶೀಲನೆ ನಡೆಸಿದಾಗ ಅದು ಜೇಡರ ಹುಳು ಎಂದು ತಿಳಿದಿದೆ. ಮಾತ್ರವಲ್ಲದೆ ಒಂದು ದಿನ ಅದು ಕಿವಿಯೊಳಕ್ಕೆ ಜೀವಂತ ಆಗಿರುವುದೂ ತಿಳಿದಿದೆ. ಇದರಿಂದ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಂತರ ಈ ಜೇಡರ ಹುಳುವನ್ನು ಇಲೆಕ್ಟ್ರಿಕ್ ಓಟೋಸ್ಕೋಪ್ ಬಳಸಿ ಹೊರ ತೆಗೆಯಲಾಗಿದೆ. ಇದೀಗ ಮಹಿಳೆ ನಿರಾಳರಾಗಿದ್ದಾರೆ ಎಂದು ತಿಳಿದು ಬಂದಿದೆ.