ಮೊಟ್ಟೆ ಗಂಟಲಿನಲ್ಲಿ ಸಿಲುಕಿ ಸಾವನ್ನಪ್ಪಿದ ಮಧ್ಯವಯಸ್ಕ ಮಹಿಳೆ
Thursday, October 14, 2021
ನಾಗರ್ ಕರ್ನೂಲ್(ತೆಲಂಗಾಣ): ತೆಲಂಗಾಣದ ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ನೇರಳಪಲ್ಲಿಯಲ್ಲಿ ಮಧ್ಯವಯಸ್ಕ ಮಹಿಳೆ ಮೊಟ್ಟೆ ಗಂಟಲಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.
ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ನೇರಳಪಲ್ಲಿಯ ನೀಲಮ್ಮ(50) ಮೊಟ್ಟೆ ಗಂಟಲಿನಲ್ಲಿ ಸಿಲುಕಿ ಮೃತಪಟ್ಟ ಮಹಿಳೆ.
ಮೃತ ನೀಲಮ್ಮ ಮನೆಯಲ್ಲಿ ಊಟದೊಂದಿಗೆ ಬೇಯಿಸಿದ ಮೊಟ್ಟೆ ತಿನ್ನಲು ಬಾಯಿಯೊಳಗೆ ಹಾಕಿಕೊಂಡಿದ್ದರು. ಆದರೆ ಮೊಟ್ಟೆ ನೇರವಾಗಿ ಗಂಟಲಿನ ಭಾಗದಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರುಗಟ್ಟಿ ಅವರು ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ನೀಲಮ್ಮನವರ ಕುಟುಂಬಸ್ಥರು ಆಕೆ ಮೊಟ್ಟೆ ಗಂಟಲಿನಲ್ಲಿ ಸಿಲುಕಿ ಮೃತಪಟ್ಟಿರುವರೆಂದು ದೂರು ನೀಡಿದ್ದಾರೆಂದು ತಿಳಿದು ಬಂದಿದೆ.