
FACEBOOK ಗಲಾಟೆ- ಬಿಜೆಪಿ ನಾಯಕನ ಮೇಲೆ ತಲವಾರು ದಾಳಿ
Wednesday, October 27, 2021
ಮಂಗಳೂರು; ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ನಾಯಕನ ಮೇಲೆ ತಲವಾರು ದಾಳಿ ನಡೆದ ಘಟನೆ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನಲ್ಲಿ ಡೆದಿದೆ.
ಪ್ರಕಾಶ್ ಬೆಳ್ಳೂರು ಅವರು ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.
ಪ್ರಕಾಶ್ ಅವರು ಪ್ರವಾಸಿ ಪ್ರಬಂದಕನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು ಕೋವಿಡ್ 19 ಬಂದ ಕಾರಣ ಮನೆಯಲ್ಲಿದ್ದಾರೆ .
ಇವರು ಆರೋಪಿ ನಿತಿನ್ ಪರವಾಗಿ ರೂ 25000 ಹಣ ಪಡೆದುಕೊಂಡು ಉಜಿರೆಯಲ್ಲಿ ನಡೆದ ಘಟನೆ ಬಗ್ಗೆ ಕೆಲಸ ಮಾಡಿದ್ದರು ಎಂದು ರತ್ನಾಕರ ಕೋಟ್ಯಾನ್ ಎಂಬವರು ಅಪಪ್ರಚಾರ ಮಾಡಿದ್ದರು. ಇದನ್ನು ತಿಳಿದು ಪ್ರಕಾಶ್ ಅವರು ಪಣೋಲಿಬೈಲು ದೇವಸ್ಥಾನಕ್ಕೆ ಸತ್ಯಾಸತ್ಯತೆ ಬಗ್ಗೆ ಬರುವಂತೆ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದರು.
ಈ ಫೇಸ್ ಬುಕ್ ನ್ನು ಹಾಕಿದ ವಿಚಾರದಲ್ಲಿ ನಿತಿನ್, ನಿಶಾಂತ್ ಮತ್ತು ರತ್ನಾಕರ ಕೋಟ್ನಾನ್ ರವರು ಪ್ರಕಾಶ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನಿನ್ನೆ ( ಅ.26) ಸಂಜೆ 7.30 ಗಂಟೆಗೆ ಪ್ರಕಾಶ್ ಅವರು ಮನೆಯಲ್ಲಿದ್ದ ಸಮಯ ನಿತಿನ್ ನಿಶಾಂತ್ ಮತ್ತು ಇತರರು ಇವರ ಮನೆಗೆ ಅಕ್ರಮ ಪ್ರವೇಶ ಮಾಡಿದ್ದರು. ನಿತಿನ್ ಕೈಯಲ್ಲಿ ತಲವಾರು ಹಿಡಿದುಕೊಂಡು ಬಂದು ಪ್ರಕಾಶ್ ರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನೀನು ನಮ್ಮ ಬಗ್ಗೆ ಫೇಸ್ ಬುಕ್ ನಲ್ಲಿ ಬಾರಿ ಫೋಸ್ಟ್ ಮಾಡುತ್ತೀಯಾ ಎಂದು ಹೇಳಿ ಆತನ ಕೈಯ್ಯಲ್ಲಿದ್ದ ತಲವಾರಿನಿಂದ ಕಡಿಯಲು ಬೀಸಿದ್ದಾರೆ.
ಆ ಸಮಯ ಪ್ರಕಾಶ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತಲವಾರು ಎಡ ಕಿವಿಗೆ ತಾಗಿ ರಕ್ತಗಾಯವಾಗಿದೆ. ಅ ಸಮಯ ಉಳಿದವರು ಕಡಿ ಬಿಡಬೇಡ ಅವನನ್ನು ಎಂದು ಹೇಳುತ್ತಾ ಅವರ ಬೆನ್ನಿಗೆ ಬಲ ತೊಡೆಗೆ ಬಲ ಭುಜಕ್ಕೆ ತಲೆಗೆ ಹಿಗ್ಗಾ ಮುಗ್ಗ ಕೈಯಿಂದ ಹೊಡೆದಿದ್ದಾರೆ.
ಈ ಸಮಯ ಪ್ರಕಾಶ್ ನೆಲಕ್ಕೆ ಬಿದ್ದಾಗ ಆರೋಪಿಗಳು ಕಾಲಿನಿಂದ ತುಳಿದ ಪರಿಣಾಮ ಇವರ ಎಡ ಕಾಲಿನ ಮೊಣ ಗಂಟಿಗೆ , ಕೋಲು ಕಾಲಿಗೆ ಮತ್ತು ಪಾದಕ್ಕೆ ತರಚಿದ ಗಾಯವಾಗಿದೆ.
ಪ್ರಕಾಶ್ ಅವರು ಜೋರಾಗಿ ಬೊಬ್ಬೆ ಹೊಡೆದಾಗ ಅಣ್ಣ ರವೀಂದ್ರ , ಲೀಲಾ ಮತ್ತು ಅತ್ತಿಗೆ ಗಲಾಟೆ ಬಿಡಿಸಲು ಬಂದಾಗ ಆರೋಪಿಗಳು ಅವರನ್ನು ಉದ್ದೇಶಿಸಿ ನೀವು ಹತ್ತಿರ ಬಂದರೆ ನಿಮ್ಮನ್ನು ಕೂಡ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಓಡಿ ಹೋಗಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.