
ಪತಿಯನ್ನೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕುವಂತೆ ಮಾಡಲು ಪತ್ನಿಯಿಂದ ಸಂಚು: ಆರೋಪಿತೆಯನ್ನು ಬಂಧಿಸಿದ ಪೊಲೀಸರು
Monday, October 11, 2021
ತ್ರಿಶ್ಶೂರ್: ಪತಿಯ ಕಾಲು ತುಂಡರಿಸಿ ಆತನನ್ನು ಮಾದಕವಸ್ತು ಜಾಲ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದ ಯುವತಿಯೋರ್ವಳನ್ನು ಕೇರಳದ ನೆಡುಪುಳ ಪೊಲೀಸರು ಬಂಧಿಸಿದ್ದಾರೆ.
ನಯನಾ (30) ಪ್ರಕರಣದ ಆರೋಪಿತೆ.
ಕೋರ್ಕೆಂಚೆರಿ ನಿವಾಸಿಯಾದ ಪತಿ ಸಿ.ಪಿ. ಪ್ರಮೋದ್ ಮೇಲೆ ಹಲ್ಲೆ ನಡೆಸಲೆಂದು ಗ್ಯಾಂಗ್ ಒಂದಕ್ಕೆ ನಯನಾ ಸುಪಾರಿ ನೀಡಿದ್ದಳು. ಪ್ರಕರಣದ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಆರೋಪಿತೆ ನಯನಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದದ್ದಾರೆ. ಇದೀಗ ಆಕೆಗೆ ಜಾಮೀನು ದೊರಕಿದೆ.
ಆದರೆ, ಕೌಟುಂಬಿಕ ನ್ಯಾಯಾಲಯದಲ್ಲಿ ಆಕೆಯ ಮತ್ತು ಪತಿಯ ಪ್ರಕರಣವು ಬಾಕಿಯಿದೆ. ಆಕೆ ತನ್ನ ಪತಿಯ ಮೇಲೆ ಹಲ್ಲೆ ನಡೆಸಿ ಆತನಿಗೆ ವಿವಾಹೇತರ ಸಂಬಂಧವಿದೆ ಎಂದು ಬಿಂಬಿಸಲು ಹಾಗೂ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡಲು ಗ್ಯಾಂಗ್ ಒಂದನ್ನು ನಯನಾ ಸಂಪರ್ಕಿಸಿದ್ದಳು. ಬಳಿಕ ಪ್ಲಾನ್ನಂತೆಯೇ ಪತಿಯ ಮೇಲೆ ಹಲ್ಲೆಯನ್ನೂ ಮಾಡಿಸಿದ್ದಳು.
ಈ ಬಗ್ಗೆ ನಯನಾ ಪತಿ ಪ್ರಮೋದ್, ಕಳೆದ ಏಪ್ರಿಲ್ನಲ್ಲಿ ಆಕೆಯ ವಿರುದ್ಧ ದೂರು ದಾಖಲಿಸಿದ್ದರು. ತನಿಖೆಯ ಸಂದರ್ಭ ಪೊಲೀಸರಿಗೆ ದೊರಕಿರುವ ಸಂದೇಶವನ್ನು ಆಧರಿಸಿ ನಯನಾಳನ್ನು ಬಂಧಿಸಿ, ನ್ಯಾಯಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಆಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ.