
ಉಡುಗೊರೆಯಾಗಿ ಬಂದ ದುಬಾರಿ ವಾಚ್ ಸೇರಿದಂತೆ ಗಿಫ್ಟ್ ಗಳನ್ನು ಮಾರಿದ ಆರೋಪ ಎದುರಿಸುತ್ತಿರುವ ಪಾಕ್ ಪ್ರಧಾನಿ: ವಿಪಕ್ಷ ಆರೋಪ
Friday, October 22, 2021
ಲಾಹೋರ್: ತಮಗೆ ವಿದೇಶದಿಂದ ಬಂದಿರುವ 1ಮಿಲಿಯನ್ ಯುಎಸ್ ಡಾಲರ್ ನ ವಾಚ್ ಸೇರಿದಂತೆ ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿರುವ ಆರೋಪವೊಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕೇಳಿ ಬರುತ್ತಿದೆ. ವಿಪಕ್ಷಗಳು ಈ ಬಗ್ಗೆ ಗಂಭೀರ ಆರೋಪವನ್ನು ಮಾಡುವ ಮೂಲಕ ಇಮ್ರಾನ್ ಖಾನ್ ಅವರನ್ನು ದೂಷಿಸಿದೆ.
ಪಿಎಂಎಲ್ -ಎನ್ ಉಪಾಧ್ಯಕ್ಷ ಮರ್ಯಾಮ್ ನವಾಜ್ ಅವರು ಇಮ್ರಾನ್ ಖಾನ್ ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆಂದು ಆರೋಪಿಸಿ ಉರ್ದುವಿನಲ್ಲಿ ಟ್ವೀಟ್ ಮಾಡಿದ್ದಾರೆ.
‘ದುಬಾರಿ ವಾಚನ್ನು ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ. ಇದು ನಾಚಿಕೆಗೇಡು’ ಎಂದು ವಿಪಕ್ಷದ ಮೈತ್ರಿ ಪಕ್ಷವಾದ ಪಿಡಿಎಂ ಅಧ್ಯಕ್ಷ ಮೌಲಾನಾ ಫಜ್ಲುರ್ ರೆಹಮಾನ್ ಆರೋಪಿಸಿದ್ದಾರೆ.