
ಅಪ್ರಾಪ್ತ ಯುವತಿಯರ ಖಾಸಗಿ ಪೊಟೋ ಶೇರ್ ಮಾಡುತ್ತಿದ್ದ ಐಐಟಿ ವಿದ್ಯಾರ್ಥಿ ಬಲೆಗೆ- ಈ ಪೊಟೋಗಳನ್ನು Instagram ಗೂ ಅಪ್ಲೋಡ್ ಮಾಡ್ತಿದ್ದ!
Thursday, October 7, 2021
ನವದೆಹಲಿ: ಅಪ್ರಾಪ್ತ ಯುವತಿಯ ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದ ಐಐಟಿ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ಮಹಾವೀರ್ ಬಂಧಿತ ಆರೋಪಿ. ಈತನಿಂದ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈತ ಬಿಹಾರ ರಾಜ್ಯದ ನಿವಾಸಿಯಾಗಿದ್ದಾನೆ. ಈತ ಬಾಲಕಿಯನ್ನು ಪುಸಲಾಯಿಸಿ ಆಕೆಯ ಖಾಸಗಿ ಫೋಟೋಗಳನ್ನು ತರಿಸಿಕೊಂಡಿದ್ದ. ಈತ ಆಕೆಯಿಂದ ಪಡೆದ ಪೊಟೋ ಗಳನ್ನು ಆನ್‌ಲೈನ್ ತರಗತಿಗಳಿಗೆ ಮಾಡಿದ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡುತ್ತಿದ್ದನು.
ಈತ ದೆಹಲಿ ಸ್ಕೂಲ್ ನ ಸುಮಾರು ಐವತ್ತಕ್ಕೂ ಅಧಿಕ ಅಪ್ರಾಪ್ತ ಯುವತಿಯರು ಹಾಗೂ ಶಿಕ್ಷಕಿಯರಿಗೆ ಈತ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಈತ instagram ನಲ್ಲಿ ಖಾತೆ ತೆರೆದು ಅದರಲ್ಲಿ ಅಶ್ಲೀಲ ಪೊಟೋ ಶೇರ್ ಮಾಡುತ್ತಿದ್ದ.ಈ ಬಗ್ಗೆ ದೆಹಲಿಯ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.