
Job in Indian Post- ಅಂಚೆ ಇಲಾಖೆಯಲ್ಲಿ 221 ಹುದ್ದೆ: ಪೋಸ್ಟ್ ಮ್ಯಾನ್, ಸಾರ್ಟಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಂಚೆ ಇಲಾಖೆಯಲ್ಲಿ 221 ಹುದ್ದೆ: ಪೋಸ್ಟ್ ಮ್ಯಾನ್, ಸಾರ್ಟಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಅಂಚೆ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಕ್ರೀಡಾ ಕೋಟಾ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ಇಲಾಖೆ ಮುಂದಾಗಿದೆ.
ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್, ಕ್ರಿಕೆಟ್, ಸೈಕ್ಲಿಂಗ್, ಶೂಟಿಂಗ್, ಕುಸ್ತಿ, ವಾಲಿಬಾಲ್, ಟೆನ್ನಿಸ್, ಚೆಸ್, ಹಾಕಿ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿವರಗಳು ಹೀಗಿವೆ...
ಸಂಸ್ಥೆ ಹೆಸರು: ಭಾರತೀಯ ಅಂಚೆ ಇಲಾಖೆ (Indian Post)
ಹುದ್ದೆಗಳ ಸಂಖ್ಯೆ: ಒಟ್ಟು 221 ಹುದ್ದೆಗಳು
ಶೈಕ್ಷಣಿಕ ಅರ್ಹತೆ: ಪಿಯುಸಿ ಜೊತೆ ಕಂಪ್ಯೂಟರ್ ಜ್ಞಾನ PUC, with Computer Knowledge
ವೇತನ : Rs. 21,700 ರಿಂದ Rs. 69,100 (ಇತರ ಭತ್ಯೆಗಳು ಸೇರಿ)
ವಯಸ್ಸು: ಕನಿಷ್ಟ 18 ಗರಷ್ಟ 27. ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆ: ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಇತರ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 12/11/2021
ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ಅಂತರ್ಜಾಲವನ್ನು ವೀಕ್ಷಿಸಬಹುದು:
https://www.indiapost.gov.in/vas/Pages/IndiaPostHome.aspx
ಅಧಿಸೂಚನೆಗಾಗಿ ಈ ಲಿಂಕ್ ಬಳಸಿ:
https://www.indiapost.gov.in/VAS/Pages/Content/Recruitments.aspx?Category=Recruitment