-->
Job recruitment of Village Accountant's in Karnataka- 355 ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಾತಿ: ಉಡುಪಿ, ಹಾಸನ ಸಹಿತ ನೂರಾರು ಉದ್ಯೋಗ

Job recruitment of Village Accountant's in Karnataka- 355 ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಾತಿ: ಉಡುಪಿ, ಹಾಸನ ಸಹಿತ ನೂರಾರು ಉದ್ಯೋಗ

355 ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಾತಿ: ಉಡುಪಿ, ಹಾಸನ ಸಹಿತ ನೂರಾರು ಉದ್ಯೋಗ





ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗ (ವಿಲೇಜ್ ಅಕೌಂಟೆಂಟ್) ಹುದ್ದೆಗೆ ನೇರ ನೇಮಕಾತಿ ಬಯಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.



ಉಡುಪಿ, ಹಾಸ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ರಾಯಚೂರು, ದಾವಣಗೆರೆ ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಒಟ್ಟು 355 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇವೆ.



ರಾಜ್ಯ ಸರ್ಕಾರ ಅಕ್ಟೋಬರ್ 25, 2021ರಂದು ಅಧಿಸೂಚನೆ ಹೊರಡಿಸಿದ್ದು, 10 ಜಿಲ್ಲೆಗಳ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ನೇರ ನೇಮಕಾತಿಯ ಆದೇಶವನ್ನು ಕಳುಹಿಸಿದೆ.




ಆಸಕ್ತ ಅಭ್ಯರ್ಥಿಗಳು ಪಿಯುಸಿ ಅಥವಾ ಪದವಿ ಶಿಕ್ಷಣವನ್ನು ಮುಗಿಸಿರಬೇಕು.



ವಯೋಮಿತಿ; ಕನಿಷ್ಟ 18 ಹಾಗೂ ಗರಿಷ್ಟ 35 ವರ್ಷ ವಯಸ್ಸಾಗಿರಬೇಕು.



ನಿಯಮಾನುಸಾರ ವಯೋಮಿತಿಯಲ್ಲಿ ಸೂಕ್ತ ರಿಯಾಯಿತಿ ಇರುತ್ತದೆ.



District                         No. of Posts


Chamarajnagar                     40


Bangalore                              11


Udupi                                    18


Ramanagara                          1


Chitradurga                         59


Shimoga                               69


Hassan                                 34


Mandya                                54


Raichur                                51


Davanagere                         18



ಈ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡಲು ನೇರ ಸಂದರ್ಶನದ ಮೂಲಕ ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಯದುಕುಮಾರ್ ಅವರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.




ತಕ್ಷಣ ಆಯಾ ಜಿಲ್ಲೆಗಳ ಆಸಕ್ತ ಅಭ್ಯರ್ಥಿಗಳು ಜಿಲ್ಲಾಧಿಕಾರಿಯವರ ಸೂಚನಾ ಫಲಕದಲ್ಲಿ ಅಳವಡಿಸಲಾದ ಸರ್ಕಾರಿ ಸುತ್ತೋಲೆಯನ್ನು ನೋಡಿ, ಅದರ ಪ್ರಕಾರ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.






Ads on article

Advertise in articles 1

advertising articles 2

Advertise under the article