-->
Kalladka KT Hotel Demolished- ಇತಿಹಾಸದ ಪುಟ ಸೇರಿದ ಮೂರು ತಲೆಮಾರಿನ ಕಲ್ಲಡ್ಕ ಕೆ.ಟಿ. ಹೊಟೇಲ್: ಇನ್ಮೇಲೆ ಹೊಸ ರೂಪದಲ್ಲಿ

Kalladka KT Hotel Demolished- ಇತಿಹಾಸದ ಪುಟ ಸೇರಿದ ಮೂರು ತಲೆಮಾರಿನ ಕಲ್ಲಡ್ಕ ಕೆ.ಟಿ. ಹೊಟೇಲ್: ಇನ್ಮೇಲೆ ಹೊಸ ರೂಪದಲ್ಲಿ

ಇತಿಹಾಸದ ಪುಟ ಸೇರಿದ ಮೂರು ತಲೆಮಾರಿನ ಕಲ್ಲಡ್ಕ ಕೆ.ಟಿ. ಹೊಟೇಲ್: ಇನ್ಮೇಲೆ ಹೊಸ ರೂಪದಲ್ಲಿ





ಕರಾವಳಿ ನಗರಿ ಮಂಗಳೂರಿಗೆ ಸಿನಿಮಾನಟರು, ರಾಜಕಾರಣಿಗಳು, ಉದ್ಯಮಿಗಳು, ಜನಸಾಮಾನ್ಯರು ಯಾರೇ ಬರಲಿ, ಬರುವಾಗ ಕಲ್ಲಡ್ಕದಲ್ಲಿ ಒಂದು ಕೆ.ಟಿ. ಸ್ಪೆಷಲ್ ಟೀ ಕುಡಿಯದವರೇ ಇಲ್ಲ. ಕಲ್ಲಡ್ಕ ಕೆ.ಟಿ. ಎಂದೇ ಹೆಸರುವಾಸಿಯಾದ ಈ ಹೊಟೇಲ್ ಇತಿಹಾಸದ ಪುಟ ಸೇರುತ್ತಿದೆ.




ಈ ಹೊಟೇಲ್‌ಗೆ ಬಂದವರು ಮೊದಲು ಆರ್ಡರ್ ಮಾಡುವುದೇ ಕೆ.ಟಿ. ಉಳಿದೆಲ್ಲ ನಂತರದ್ದು. ಅಂತಹ ಹೊಟೇಲ್ ಇತಿಹಾಸದ ಪುಟ ಸೇರುತ್ತಿರುವುದು ಏಕೆ ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.






ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹಾದು ಹೋಗುವಾಗ ಸಿಗುವ ಲಕ್ಷ್ಮ್ಈ ನಿವಾಸ ಹೊಟೇಲ್ ಕಟ್ಟಡ ಈಗ ನೆಲಸಮವಾಗಿದೆ. ಸುಮಾರು 70 ವರ್ಷ ಹಳೆಯದಾದ ಈ ಹೊಟೇಲನ್ನು ಮೂರು ತಲೆಮಾರುಗಳಿಂದ ನಡೆಸಿಕೊಂಡು ಬರಲಾಗುತ್ತಿತ್ತು.



ಲಕ್ಷ್ಮೀನಾರಾಯಣ ಹೊಳ್ಳ ಈ ಹೊಟೇಲನ್ನು ಪ್ರಾರಂಭಿಸಿದರು. ಬೈಕ್ ರೈಡ್, ಲಾಂಗ್ ಡ್ರೈವ್‌ಗಾಗಿ ಈ ದಾರಿಯಲ್ಲಿ ತೆರಳುವವರು ಇಲ್ಲಿನ ಚಹಾ ಮಿಸ್ ಮಾಡದೆ ಕುಡಿಯುತ್ತಾರೆ. ಇದನ್ನು ಬಿಟ್ಟು ಮುಂದೆ ಹೋಗುವ ಮಾತೇ ಇಲ್ಲ.




ಇಂತಹ ಜನಪ್ರಿಯ ಹೊಟೇಲ್ ಈಗ ನೆಲಸಮವಾಗಿದೆ. ಬಂಟ್ವಾಳ ತಾಲೂಕಿನ ಹೆದ್ದಾರಿ ಬದಿಯ ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಾಣ ಹಾಗೂ ರಸ್ತೆ ಅಗಲಗೊಳಿಸುವ ಕಾರ್ಯಕ್ಕೆ ಪೂರ್ವಭಾವಿಯಾಗಿ ಕಟ್ಟಡ ನೆಲಸಮ ಮಾಡಲಾಗಿದೆ.






ಇನ್ನು, ಕೆಡವಲಾದ ಇದೇ ಕಟ್ಟಡದ ಹಿಂದೆ ಇರುವ ಜಾಗದಲ್ಲಿ ನಿರ್ಮಾಣವಾಗಲಿರುವ ಹೊಸ ಕಟ್ಟಡದಲ್ಲಿ ಲಕ್ಷ್ಮೀ ನಿವಾಸ ಹೊಸ ರೂಪದಲ್ಲಿ ಜನರಿಗೆ ಕೆ.ಟಿ. ಟೇಸ್ಟನ್ನು ನೀಡಲಿದೆ.








Ads on article

Advertise in articles 1

advertising articles 2

Advertise under the article