
Kori Rotti Owner expired - ಕೋರಿ ರೊಟ್ಟಿ ಒಡೆಯ, ಉದ್ಯಮಿ ಲಕ್ಷ್ಮಣ ಶೆಟ್ಟಿ ಇನ್ನಿಲ್ಲ
ಕೋರಿ ರೊಟ್ಟಿ ಒಡೆಯ, ಉದ್ಯಮಿ ಲಕ್ಷ್ಮಣ ಶೆಟ್ಟಿ ಇನ್ನಿಲ್ಲ
ಮಂಗಳೂರು ಶಿವಬಾಗ್ ನಿವಾಸಿ ಕೊಡಿಯಾಲ್‍ಬೈಲ್ ಲಕ್ಷ್ಮಣ್ ಶೆಟ್ಟಿ (80) ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ನಗರದ ವಿನಯಾ ನರ್ಸಿಂಗ್ ಹೋಮ್‌ನಲ್ಲಿ ಭಾನುವಾರ ನಿಧನರಾದರು.
ಅವರು ಪತ್ನಿ ಶ್ರೀಮತಿ ಸುಪ್ರಿತಾ, ಮಗ ಸುಬೋಧ್ ಮತ್ತು ಮಗಳು ಸುಮಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಉದ್ಯಮಿಯಾಗಿದ್ದ ಅವರು ಈಗಲ್ ಎಲೆಕ್ಟ್ರಿಕಲ್ಸ್ ಮತ್ತು ಪ್ರಸನ್ನ ಟೆಕ್ನಾಲಜೀಸ್ ಮಾಲೀಕರಾಗಿದ್ದರು.
ಅವರು ಹಲವು ವರ್ಷಗಳ ಕಾಲ ಸಂತ ಅಲೋಶಿಯಸ್ ಕಾಲೇಜ್ ಕ್ಯಾಂಟೀನ್ ನ ಮಾಲೀಕರಾಗಿದ್ದರು ಮತ್ತು ವಿದ್ಯಾರ್ಥಿ ಚಟುವಟಿಕೆಗಳನ್ನು ಉದಾರವಾಗಿ ಬೆಂಬಲಿಸುವುದರ ಮೂಲಕ ಅವರು ವಿದ್ಯಾರ್ಥಿಗಳಲ್ಲಿ ಬಹಳ ಜನಪ್ರಿಯರಾಗಿದ್ದರು.
ಎಂಬತ್ತರ ದಶಕದಲ್ಲಿ ಅವರು ರಾಮ ಭವನ ಕಾಂಪ್ಲೆಕ್ಸ್‌ನಲ್ಲಿ ಶೆಟ್ಟಿ’ಸ್ ಕೋರಿ ರೊಟ್ಟಿ ರೆಸ್ಟೋರೆಂಟ್ ಮತ್ತು ಎಂಜಿ ರಸ್ತೆಯ ಕೆನರಾ ಕಾಲೇಜಿನ ಬಳಿ ಕೋರಿ ರೊಟ್ಟಿ ಫಾಸ್ಟ್ ಫುಡ್ ಅನ್ನು ಪ್ರಾರಂಭಿಸಿದ್ದರು.
ಇದು ನಗರದ ಮೊದಲ ಕ್ಯಾರಿ ಹೋಮ್ ಆಹಾರ ಮಳಿಗೆಗಳಲ್ಲಿ ಒಂದಾಗಿತ್ತು. ಕೋರಿ ರೊಟ್ಟಿ, ಚಿಕನ್ ಸುಕ್ಕಾ, ಪುಲಿಮುಂಚಿ ಮತ್ತು ಇತರ ಖಾದ್ಯಗಳಂತಹ ಸಾಂಪ್ರದಾಯಿಕ ತುಳುನಾಡು ಪಾಕ ಪದ್ಧತಿಯನ್ನು ಇದು ಜನಪ್ರಿಯಗೊಳಿಸಿತ್ತು.